ADVERTISEMENT

ತೋಟಗಾರ್ಸ್ ಸೊಸೈಟಿಯಲ್ಲಿ ಕಳವಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 13:59 IST
Last Updated 28 ನವೆಂಬರ್ 2020, 13:59 IST

ಸಾಗರ: ನಗರದ ಕೆಳದಿ ರಸ್ತೆಯಲ್ಲಿರುವ ತೋಟಗಾರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಿಟಕಿಯ ರಾಡ್ ಕತ್ತರಿಸಿ ಒಳಕ್ಕೆ ನುಗ್ಗಿರುವ ಕಳ್ಳರು ಕಳವಿಗೆ ಪ್ರಯತ್ನ ನಡೆಸಿದ್ದಾರೆ.

ಶುಕ್ರವಾರ ತಡರಾತ್ರಿಸೊಸೈಟಿಯ ಕಚೇರಿಯ ಒಳಕ್ಕೆ ನುಗ್ಗಿ ಹಣಕ್ಕಾಗಿ ಹುಡುಕಿದ ಕಳ್ಳರು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಚೇರಿಯಲ್ಲಿದ್ದ ಒಂದು ಮೊಬೈಲ್‌ ಅನ್ನು ತೆಗೆದುಕೊಂಡು ಹೋಗಿರುವ ಕಳ್ಳರು ಅಲ್ಲಿದ್ದ ಲ್ಯಾಪ್‌ಟಾಪ್ ಅನ್ನು ಕಚೇರಿ ಹಿಂಭಾಗದಲ್ಲಿ ಎಸೆದಿದ್ದಾರೆ.

ಸೊಸೈಟಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಎರಡು ದಿನಗಳ ಹಿಂದಷ್ಟೆ ಹಾಳಾಗಿದ್ದು, ಅದನ್ನು ರಿಪೇರಿಗೆ ಕಳುಹಿಸಿದ ಸಂದರ್ಭದಲ್ಲೆ ಕಳುವಿಗೆ ಯತ್ನ ನಡೆದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.