ADVERTISEMENT

ಶಿವಮೊಗ್ಗ: ಔರಾದ್ಕರ್ ವರದಿ ಜಾರಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 6:04 IST
Last Updated 3 ಅಕ್ಟೋಬರ್ 2021, 6:04 IST

ಶಿವಮೊಗ್ಗ: ‘ಔರಾದ್ಕರ್ ವರದಿಯಿಂದ ಶೇ 20ರಷ್ಟು ಮಂದಿಗೆ ಮಾತ್ರ ವಂಚಿತರಾಗಿದ್ದಾರೆ. ಅವರಿಗೂ ವೇತನದಲ್ಲಿ ಅನುಕೂಲ ಮಾಡಿಕೊಟ್ಟಿದ್ದೇವೆ. ಔರಾದ್ಕಾರ್ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತಿದೆ. ಔರಾದ್ಕರ್ ವರದಿ ಜಾರಿ ಮಾಡುತ್ತೇವೆ’ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯ ಪೊಲೀಸ್ ಸಿಬ್ಬಂದಿಗೆ ಔರಾದ್ಕರ್ ವರದಿ ಜಾರಿಗೊಳಿಸಲು ಆಗದಿದ್ದರೂ ಅವರಿಗೆ ತುಟ್ಟಿಭತ್ಯದಲ್ಲಿ ಹೆಚ್ಚಿಗೆ ಮಾಡಲಾಗಿದೆ. ಸರ್ಕಾರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ. ಹೀಗಾಗಿ ಶೇ 80ರಷ್ಟು ಔರಾದ್ಕರ್ ವರದಿಯನ್ನು ಜಾರಿ ಮಾಡಿದ್ದೇವೆ. ಪೊಲೀಸ್ ಹಿರಿಯ ಸಿಬ್ವಂದಿಗೆ ಇದು ಅನುಕೂಲವಾಗದಿದ್ದರೂ 2005 ರ ನಂತರ ಇಲಾಖೆಗೆ ಸೇರಿದ ಪೊಲೀಸರಿಗೆ ಇದು ಅನುಕೂಲವಾಗಿದೆ’ ಎಂದರು.

ಗಾಂಜಾ, ಕಳ್ಳತನ ಹದ್ದುಬಸ್ತಿಗೆ ಸೂಚನೆ:‘ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಗಾಂಜಾ, ಕಳ್ಳತನ ಪ್ರಕರಗಳು ನಡೆಯುತ್ತಲೇ ಇವೆ. ಇಂತಹ ಕೃತ್ಯಗಳನ್ನು ಹದ್ದುಬಸ್ತಿನಲ್ಲಿ ಇಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಗಳೊಂದಿಗೆ ಮಾತನಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ವಿಶೇಷವಾಗಿ ಗಾಂಜಾ ಪ್ರಕರಣವನ್ನು ಹದ್ದುಬಸ್ತಿನಲ್ಲಿಡಬೇಕಿದೆ. ಜಿಲ್ಲೆಯಲ್ಲಿ ಹೇರಳವಾಗಿ ಗಾಂಜಾ ಬೆಳೆದು ನಿಂತಿದೆ. ಮೆಗ್ಗಾನ್ ನಲ್ಲಿ ಒಂದು ಉಪಕರಣ ಬಂದಿದೆ. ಗಾಂಜಾ ಸೇವಿಸಿ 10 ದಿನಗಳ ನಂತರವೂ ಮೂತ್ರ ಪರೀಕ್ಷೆ ನಡೆಸಿದರೆ ಅದು ಗಾಂಜಾ ಸೇವನೆಯನ್ನು ಸೂಚಿಸುತ್ತದೆ. ರಕ್ತಪರೀಕ್ಷೆಯಲ್ಲೂ ತಿಳಿಯುತ್ತದೆ. ಇದರ ಮೂಲಕ ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.