ADVERTISEMENT

ಶಿವಮೊಗ್ಗ | ಆಯುಷ್ ಇಲಾಖೆ ವೈದ್ಯರು, ಸಿಬ್ಬಂದಿ ಕಾಯಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 11:56 IST
Last Updated 25 ಏಪ್ರಿಲ್ 2020, 11:56 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ವೈದ್ಯರು,ನೌಕರರ ವೇತನ ಹೆಚ್ಚಳ ಮಾಡಬೇಕು. ಅವರ ಸೇವೆ ಕಾಯಂಗೊಳಿಸಬೇಕು ಎಂದುವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದರು.

ಕೊರೊನಾ ಸನ್ನಿವೇಶದಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. 20 ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ.ರಾಜ್ಯ ಸರ್ಕಾರ ಅಲೋಪತಿ ವೈದ್ಯರ ವೇತನ ₹ 40 ಸಾವಿರದಿಂದ ₹ 80 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೆ ಆಯುಷ್ ವೈದ್ಯರ ವೇತನವನ್ನೂ ಹೆಚ್ಚಳ ಮಾಡಬೇಕು. ₹ 12 ಸಾವಿರದಿಂದ ₹ 20 ಸಾವಿರಕ್ಕೆ ದುಡಿಯುತ್ತಿದ್ದಾರೆ. ಈ ತಾರತಮ್ಯಕೊನೆಗಾಣಿಸಬೇಕುಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮೂರು ವರ್ಷದ ಸೇವೆ ಸಲ್ಲಿಸಿದ ನಂತರ ಆರೋಗ್ಯ ಇಲಾಕೆ ವೈದ್ಯರನ್ನು ಕಾಯಂಗೊಳಿಸಲಾಗುತ್ತಿದೆ.ಆದರೆ, ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಆಯುಷ್ ಇಲಾಖೆ ಗುತ್ತಿಗೆ ವೈದ್ಯರಸೇವೆ ಇದುವರೆಗೂ ಕಾಯಂಮಾಡಿಲ್ಲ.ರಾಜ್ಯದಲ್ಲಿ 550 ಆಯುಷ್ ಗುತ್ತಿಗೆ ವೈದ್ಯರು, 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಅವರಲ್ಲಿಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಆಯುಷ್ವೈದ್ಯರನ್ನು ಕಾಯಂಗೊಳಿಸಬೇಕು ಎಂದರು.

ADVERTISEMENT

ಅತಿಥಿ ಉಪನ್ಯಾಸಕರಿಗೆ ಸರ್ಕಾರಗೌರವಧನಬಿಡುಗಡೆ ಮಾಡಿದೆ.5 ತಿಂಗಳಗೌರವಧನದಲ್ಲಿಕೇವಲ 20 ದಿನದ ಹಣನೀಡಿದೆ. ಉನ್ನತ ಶಿಕ್ಷಣ ಸಚಿವರು ಗಮನಹರಿಸುತ್ತಿದ್ದಾರೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಮೌನ ವಹಿಸಿದ್ದಾರೆ.ತಕ್ಷಣ5 ತಿಂಗಳ ಗೌರವಧನ ಬಿಡುಗಡೆ ಮಾಡಬೇಕುಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪರಂಧಾಮ ರೆಡ್ಡಿ, ಡಾ.ಶ್ರೀಧರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.