ಭದ್ರಾವತಿ: ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಸೋಮವಾರ ನಗರದ ಹೊಸಮನೆ ಮುಖ್ಯರಸ್ತೆಯ ಹೋಟೆಲ್, ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಮಾಹಿತಿ ದಂಡ ವಿಧಿಸಿ ಅರಿವು ಮೂಡಿಸಲಾಯಿತು.
ಒಟ್ಟು 30 ಪ್ರಕರಣ ದಾಖಲಿಸಿ ₹3,800 ದಂಡ ಸಂಗ್ರಹಿಸಲಾಯಿತು. ತಂಡದಲ್ಲಿ ಟಿಎಚ್ಒ ಡಾ.ಎಂ.ವಿ. ಅಶೋಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಸುಶೀಲಾ ಬಾಯಿ, ಸಿಬ್ಬಂದಿ ಆನಂದಮೂರ್ತಿ, ಹರೀಶ್, ಅಲ್ಲಾಉದ್ದೀನ್ ತಾಜ್, ಆಕಾಶ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.