ADVERTISEMENT

ರಕ್ತಸಂಬಂಧಿ ಕಾಯಿಲೆ: ನೆರವು ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 14:34 IST
Last Updated 23 ಮೇ 2025, 14:34 IST
ಕೌಶಿಕ್
ಕೌಶಿಕ್   

ಹೊಳೆಹೊನ್ನೂರು: ಪಟ್ಟಣದ ರಾಷ್ಟ್ರೋತನ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಕೌಶಿಕ್‌ಗೆ ರಕ್ತ ಸಂಬಂಧಿ ಕಾಯಿಲೆ ಇದ್ದು, ಚಿಕಿತ್ಸೆಗೆ ಅಂದಾಜು ₹ 40 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಕಡುಬಡತನದಲ್ಲಿ ಬಳಲುತ್ತಿರುವ ತಂದೆ ರಾಜಪ್ಪ ಹಾಗೂ ತಾಯಿ ನೇತ್ರಾವತಿಯ ಒಬ್ಬನೇ ಪುತ್ರ ಕೌಶಿಕ್‌ನನ್ನು ಉಳಿಸಿಕೊಳ್ಳಲು ಹಣದ ನೆರವು ಅಗತ್ಯವಿದೆ.

ಆದ್ದರಿಂದ ಕೌಶಿಕ್ ಚಿಕಿತ್ಸೆಗೆ ಸಾರ್ವಜನಿಕರು ಆರ್ಥಿಕ ನೆರವು ನೀಡಬೇಕು ಎಂದು ಪೋಷಕರು ಕೋರಿದ್ದಾರೆ. ಹಣ ನೀಡುವವರು ನೇತ್ರಾವತಿ ಅವರ ಎಸ್‌ಬಿಐ ಖಾತೆ ನಂ. 43722417094ಕ್ಕೆ ಅಥವಾ ಫೋನ್‌ಪೇ ನಂ. 88672 04919ಗೆ ಕಳುಹಿಸಬೇಕಾಗಿ ಪೋಷಕರು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.