ಶಿಕಾರಿಪುರ: ವೇಗದ ಜಗತ್ತಿನಲ್ಲಿ ನೆಮ್ಮದಿ, ಶಾಂತಿ ಸಿಗುವ ಸ್ಥಳ ದೇವಸ್ಥಾನ ಮಾತ್ರ. ಬಂಜಾರಾ ತಾಂಡಾದಲ್ಲಿ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಸಾಲೂರು ತಾಂಡದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೃಷ್ಣ ದೇವಸ್ಥಾನ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಭಾರತ ಯುದ್ಧ ಆರಂಭದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ ಗೀತೋಪದೇಶದ ತತ್ವ ಸಿದ್ಧಾಂತ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ನಮ್ಮದಾಗುತ್ತದೆ. ಕೃಷ್ಣ ನಿಷ್ಕಲ್ಮಶ ಭಕ್ತಿಗೆ ಒಲಿಯುವಾತ ಆತನ ಬಾಲಲೀಲೆ ಇಂದಿಗೂ ಪ್ರಸ್ತುತವಾಗಿದ್ದು ಪ್ರತಿವರ್ಷ ಕೃಷ್ಣವೇಷ ಧರಿಸಿ ಜನರು ಸಂಭ್ರಮಿಸುತ್ತಾರೆ ಆತನ ದೇವಸ್ಥಾನ ನಿರ್ಮಾಣ ಮಾಡುವುದು ಮಾತ್ರವಲ್ಲ ಆತನ ಆಶಯದಂತೆ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.
ಬಂಜಾರ ಸಮಾಜದ ಸೈನಾಭಗತ್ ಮಹಾರಾಜ್ ಮಾತನಾಡಿ, ‘ನಮ್ಮ ಜೀವನದಲ್ಲಿ ಸತ್ಯ, ಧರ್ಮ ಅಳವಡಿಸಿಕೊಂಡು ದೇವರಿಗೆ ಮೆಚ್ಚುವಂತೆ ಬದುಕು ಕಟ್ಟಿಕೊಳ್ಳಬೇಕು ಆಗ ಸತ್ಯ ದರ್ಶನವಾಗುತ್ತದೆ. ನೆಮ್ಮದಿ ಪ್ರಾಪ್ತವಾಗುತ್ತದೆ’ ಎಂದು ಹೇಳಿದರು.
ಬಂಜಾರ ಸಮುದಾಯದ ಮುಖಂಡರಾದ ನಾಗನಾಯ್ಕ, ದೂದನಾಯ್ಕ, ಪೀಕಾನಾಯ್ಕ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ವಸಂತಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.