ADVERTISEMENT

ಮೋದಿ ಅವಹೇಳನ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 22 ಮೇ 2025, 21:12 IST
Last Updated 22 ಮೇ 2025, 21:12 IST
<div class="paragraphs"><p> ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ ಗ್ರಾಫಿಕ್‌ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಲ್ಲಿನ ಆರ್‌ಎಂಎಲ್ ನಗರದ ನಿವಾಸಿ ಮುಜಮಿಲ್ ಮುಜ್ (38) ವಿರುದ್ಧ ದೊಡ್ಡಪೇಟೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನದ ರಾವಲ್ಪಿಂಡಿಯ ಜೈಲಿನೆದುರು ನಿಲ್ಲಿಸಿರುವಂತೆ, ರಕ್ತಸಿಕ್ತ ಉಡುಗೆಯಲ್ಲಿರುವ ಮೋದಿ ಕೈಗಳಿಗೆ ಇಬ್ಬರು ಸೈನಿಕರು ಕೋಳ ತೊಡಿಸಿರುವಂತೆ ಚಿತ್ರಿಸಿ, ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣಗೊಂಡಾಗ ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದ. 

ಪ್ರಸ್ತುತ ಉದ್ಯೋಗ ನಿಮಿತ್ತ ದುಬೈನಲ್ಲಿ ನೆಲೆಸಿರುವ ಮುಜಮಿಲ್ ವಿರುದ್ಧ ರಾಷ್ಟ್ರ ವಿರೋಧಿ ಮತ್ತು ಸಾರ್ವಜನಿಕರ ಭಾವನೆ ಕೆರಳಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.