ತೀರ್ಥಹಳ್ಳಿ: ತಾಲ್ಲೂಕಿನ ಹೆದ್ದೂರಿನಲ್ಲಿ ಶನಿವಾರ ಗಂಟಲಿನಲ್ಲಿ ಅಡಿಕೆ ಸಿಲುಕಿದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.
ಸಂದೇಶ–ಅರ್ಚನಾ ದಂಪತಿಯ ಮಗು ಶ್ರಿಯಾಂಶ (18 ತಿಂಗಳು) ಮೃತಪಟ್ಟಿರುವ ಮಗು. ಮನೆಯ ಮುಂಭಾಗ ಅಂಗಳದಲ್ಲಿ ಒಣಗಿಸಿಟ್ಟ ಅಡಿಕೆಯನ್ನು ಮಗು ಬಾಯಿಗೆ ಹಾಕಿಕೊಂಡಿತ್ತು. ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಮಗು ತೀವ್ರವಾಗಿ ಅಸ್ವಸ್ಥಗೊಂಡಿತು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.