ADVERTISEMENT

ಯೌವ್ವನ ಕಿತ್ತುಕೊಳ್ಳುವ ಯೋಜನೆ ಅಗ್ನಿಪಥ: ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:07 IST
Last Updated 28 ಜೂನ್ 2022, 5:07 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಸೋಮವಾರ ಧರಣಿ ಸತ್ಯಾಗ್ರಹ ನಡೆಯಿತು.
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಸೋಮವಾರ ಧರಣಿ ಸತ್ಯಾಗ್ರಹ ನಡೆಯಿತು.   

ತೀರ್ಥಹಳ್ಳಿ: ‘ಆರ್ಥಿಕ ಸ್ಥಿರತೆಗಾಗಿ ಯಾವ ಯೋಧ ಕೂಡ ಸೇನೆಗೆ ಸೇರುವುದಿಲ್ಲ. ವೀರ ಯೋಧರ ಗುರಿ ಕೇವಲ ದೇಶ ಸೇವೆ. ಅಗ್ನಿವೀರರ ಮೂಲಕ ಯುವ ಸಮುದಾಯದ ಯೌವ್ವನ ಕಿತ್ತುಕೊಳ್ಳುವ ಯೋಜನೆ ಅಗ್ನಿಪಥ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆರೋಪಿಸಿದರು.

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಾಪಸ್‌ ಪಡೆಯಲು ಆಗ್ರಹಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ತಾಲ್ಲೂಕು ವಕ್ತಾರ ಡಿ.ಎಸ್.‌ವಿಶ್ವನಾಥ ಶೆಟ್ಟಿ, ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕು ಅಧ್ಯಕ್ಷ ಅಮರನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಬಿ.ಗಣಪತಿ, ಮಂಜುಳ, ಮುಖಂಡರಾದ ಪಟಮಕ್ಕಿ ಮಹಾಬಲೇಶ್‌, ಅಮ್ರಪಾಲಿ ಸುರೇಶ್‌, ಕೇಳೂರು ಮಿತ್ರ, ವಿಲಿಯಂ, ವೆಂಕಟೇಶ್‌, ಹೊದಲ ವಿನಾಯಕ, ಅಜಿತ್‌ ಅಣ್ಣುವಳ್ಳಿ ಇದ್ದರು.

ADVERTISEMENT

***

30 ಸಾವಿರ ಅಗ್ನಿವೀರರು ದುಡಿಯುವ ವಯಸ್ಸಿನಲ್ಲಿ ಸೈನ್ಯದಿಂದ ಹೊರಗುಳಿಯುತ್ತಾರೆ. 23ರ ಹರೆಯದವರು ವಿದ್ಯಾಭ್ಯಾಸ, ಆರ್ಥಿಕ ಸ್ಥಿರತೆ ಇಲ್ಲದೆ ಸಮಾಜದಲ್ಲಿ ಅಗ್ನಿವೀರ ಎಂದು ಎದೆತಟ್ಟಿ ಬದುಕುವುದು ಹೇಗೆ.
–ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.