ADVERTISEMENT

ಶಿವಮೊಗ್ಗ: 50 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 3:19 IST
Last Updated 5 ನವೆಂಬರ್ 2020, 3:19 IST

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 3369 ಜನರ ಗಂಟಲಿನ ದ್ರವ ಪರೀಕ್ಷೆನಡೆಸಲಾಗಿದೆ. 2493 ಜನರ ವರದಿ ನೆಗೆಟಿವ್ ಬಂದಿದೆ. 46 ಜನರು ಗುಣಮುಖರಾಗಿದ್ದಾರೆ. 50 ಮಂದಿಗೆ ಸೋಂಕು ದೃಢಪಟ್ಟಿದೆ.

ಮನೆಯಲ್ಲಿ 154 ಸೇರಿ ಒಟ್ಟು 257 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 347ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 20,915ಕ್ಕೆ ತಲುಪಿದೆ. ಈವರೆಗೆ 19,855 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 12, ಭದ್ರಾವತಿಯಲ್ಲಿ 7, ಶಿಕಾರಿಪುರದಲ್ಲಿ 3, ತೀರ್ಥಹಳ್ಳಿಯಲ್ಲಿ 5, ಸೊರಬದಲ್ಲಿ ಹಾಗೂ ಸಾಗರದಲ್ಲಿ ತಲಾ 10, ಹೊಸನಗರದಲ್ಲಿ ಮೂವರಿಗೆ ಕೊರೊನಾ ಸೋಂಕುತಗುಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.