ADVERTISEMENT

ಎಟಿಎಂ ಕಾರ್ಡ್ ಪಡೆದು ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 9 ಮೇ 2020, 15:52 IST
Last Updated 9 ಮೇ 2020, 15:52 IST

ಶಿವಮೊಗ್ಗ: ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಎಟಿಎಂ ಪಡೆದು, ಕಾರ್ಡ್‌ ಬದಲಿಸಿ ಹಣ ಲಪಟಾಯಿಸಿದ ಆರೋಪಿಯನ್ನುಸಿಇಎನ್‌ ಅಪರಾಧ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಭದ್ರಾವತಿ ಹುಡ್ಕೊ ಕಾಲೊನಿಯ ಎನ್‌.ಸಾಗರ (27) ಬಂಧಿತ ಆರೋಪಿ.

ಭದ್ರಾವತಿ ಹಸೂರು ಸಿದ್ದಾಪುರದ ಅಹಮದ್ ಅಯೂಬ್ ಅವರು ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ತಾಂತ್ರಿಕ ಸಮಸ್ಯೆಯಾಗಿದೆ. ಅಲ್ಲೇ ಇದ್ದ ಆರೋಪಿಯ ಸಹಾಯ ಕೇಳಿದ್ದಾರೆ. ಆಗ ಸಹಾಯ ಮಾಡುವ ನೆಪದಲ್ಲಿ ಆತ ವಂಚಿಸಿದ್ದಾನೆ. ನಂತರ ₨ 37,887 ಡ್ರಾ ಮಾಡಿಕೊಂಡಿದ್ದಾನೆ. ಇನ್‌ಸ್ಪೆಕ್ಟರ್ ಗುರುರಾಜ್ ಕರ್ಕಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ADVERTISEMENT

ಮೆಸ್ಕಾಂ ಗಲಾಟೆ: ದೂರು, ಪ್ರತಿ ದೂರು ದಾಖಲು

ಮೆಸ್ಕಾಂ ಎಂಜಿನಿಯರ್, ಗುತ್ತಿಗೆದಾರರ ಮಧ್ಯೆ ಜಗಳ ನಡೆದು ಶನಿವಾರ ದೊಡ್ಡಪೇಟೆ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ ನಾಯ್ಕ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗುತ್ತಿಗೆದಾರ ನಯಾಜ್ ಅಹಮದ್ ದೂರು, ಪ್ರತಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.