ಶಿರಾಳಕೊಪ್ಪ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಚಿಕ್ಕಜಂಬೂರಿನ ಖಲಂದರ್ ಖಾನ್ (35) ಎಂಬಾತನನ್ನು ಬಂಧಿಸಲಾಗಿದ್ದು, ಅದೇ ಗ್ರಾಮದ ತಾಹೀರ್ ಬೇಗ್ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಅಪರಿಚಿತರಿಬ್ಬರು ಪರವಾನಗಿ ಇಲ್ಲದೆ ಶ್ರೀಗಂಧ ಸಾಗಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಚಿಕ್ಕಜಂಬೂರಿನ ಬಳಿ
ಪೊಲೀಸರು ದಾಳಿ ಮಾಡಿ ಮಾಲು ಸಮೇತ ಆರೋಪಿಯೊಬ್ಬನ್ನು ಬಂಧಿಸಿ ದ್ದಾರೆ. ಶ್ರೀಗಂಧ 69 ಕೆ.ಜಿ. 30 ಗ್ರಾಂ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಗಳು ದೃಢಪಡಿಸಿದ್ದಾರೆ. ಆರೋಪಿ ಗಳ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.