ADVERTISEMENT

ಮೈನವಿರೇಳಿಸಿದ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 14:19 IST
Last Updated 2 ಅಕ್ಟೋಬರ್ 2019, 14:19 IST
ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದ ಕೆಸರು ಗದ್ದೆ ಓಟದಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದ ಕೆಸರು ಗದ್ದೆ ಓಟದಲ್ಲಿ ಮಹಿಳೆಯರು ಭಾಗವಹಿಸಿದ್ದರು.   

ಶಿವಮೊಗ್ಗ: ನಗರ ಪಾಲಿಕೆ ಬುಧವಾರ ಮಲಗೊಪ್ಪದ ಬಳಿ ಹಮ್ಮಿಕೊಂಡಿದ್ದ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗುಂಪು ಓಟ, ಅಡಿಕೆ ಸುಲಿಯುವ ಸ್ಪರ್ಧೆಗಳು ಗ್ರಾಮೀಣ ದಸರಾ ಮಹೋತ್ಸವಕ್ಕೆ ಮೆರಗು ತಂದವು.

ಕೆಸರು ಗದ್ದೆ ಓಟದಲ್ಲಿ ನೂರಾರು ಯುವಕರು ಭಾಗವಹಿಸಿದ್ದರು. ಮಹಿಳೆಯರೂ ಉತ್ಸಾಹದಿಂದ ಓಟದಲ್ಲಿ ಭಾಗವಹಿಸಿದ್ದರು. ಕೆಸರಿನಲ್ಲಿ ಎದ್ದು ಬಿದ್ದು ಕಾಲುಗಳನ್ನು ಎತ್ತಿ ಓಡುವ ದೃಶ್ಯ ರೋಚಕವಾಗಿತ್ತು. ಹಗ್ಗ ಜಗ್ಗಾಟ ಕೂಡ ಗಮನಸೆಳೆಯಿತು. ಅಡಿಕೆ ಸುಲಿಯುವ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.

ರೂಪ ಅವರು 15 ನಿಮಿಷದಲ್ಲಿ 2.35 ಕೆ.ಜಿ. ಅಡಿಕೆ ಸುಲಿಯುವ ಮೂಲಕ ಪ್ರಥಮ ಬಹುಮಾನ ಪಡೆದರು. ಕವಿತಾ 2.34 ಕೆ.ಜಿ. ಅಡಿಕೆ ಸುಲಿದು ದ್ವಿತೀಯ ಬಹುಮಾನ ನಡೆದರು. ಜ್ಯೋತಿ 2.14 ಕೆ.ಜಿ. ಅಡಿಕೆ ಸುಲಿದು ತೃತೀಯ ಬಹುಮಾನ ಪಡೆದರು. ಶಶಿ, ರೇಖಾ, ಚೆಲುವಮ್ಮ ಸಮಾಧಾನಕರ ಬಹುಮಾನ ಪಡೆದರು.

ADVERTISEMENT

ಕೆಸರುಗದ್ದೆ ಓಟದ ಸ್ಪರ್ಧೆ: 16ವರ್ಷದ ಮೇಲ್ಪಟ್ಟ ಸ್ಪರ್ಧೆಯಲ್ಲಿ ಪಿ.ಧನರಾಜ್ ಪ್ರಥಮ, ಮಂಜು ದ್ವಿತೀಯ, ತೇಜ ತೃತೀಯ ಬಹುಮಾನ ಪಡೆದರು. 16 ವರ್ಷದ ಒಳಗಿನ ಸ್ಪರ್ಧೆಯಲ್ಲಿ ದೀಪಕ್ ಪ್ರಥಮ, ಜಗದೀಶ್ ದ್ವಿತೀಯ, ಗೋಕುಲ್ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಸವಿತಾ ಪ್ರಥಮ, ತನು ದ್ವಿತೀಯ ಬಹುಮಾನ ಪಡೆದರು.

ಯುವ ದಸರಾ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ನಿಧಾನಗತಿಯ ಸ್ಕೂಟರ್ ಚಾಲನೆ ಸ್ಪರ್ಧೆ ಆಯೋಜಿಸಲಾಗಿತ್ತು. ಯುವತಿಯರು ಉತ್ಸಾಹದಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.