ADVERTISEMENT

ಡಿಸಿಸಿ ಬ್ಯಾಂಕ್: ಮಂಜುನಾಥ ಗೌಡ ಬಣ ಜಯಭೇರಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 15:26 IST
Last Updated 6 ಮೇ 2019, 15:26 IST
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆಯಾದ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಅಭಿಮಾನಿಗಳು ಅಭಿನಂದಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆಯಾದ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಅಭಿಮಾನಿಗಳು ಅಭಿನಂದಿಸಿದರು.   

ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ (ಡಿಸಿಸಿ ಬ್ಯಾಂಕ್‌) ಸೋಮವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಗೆಲುವು ಸಾಧಿಸಿದ್ದು, ಅವರ ಬಣ ಬಹುಮತ ಪಡೆದಿದೆ.

ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 9 ಸ್ಥಾನ ಮಂಜುನಾಥ ಗೌಡರ ಬಣ (ಕಾಂಗ್ರೆಸ್, ಜೆಡಿಎಸ್ ಬೆಂಬಲಿತ), 4 ಸ್ಥಾನಗಳಲ್ಲಿ ಸಹಕಾರ ಭಾರತಿ (ಬಿಜೆಪಿ ಬೆಂಬಲಿತ) ಬಣದ ಸದಸ್ಯರು ಗೆಲುವು ಸಾಧಿಸಿದ್ದಾರೆ.

22 ವರ್ಷಗಳಿಂದ ಬ್ಯಾಂಕ್‌ ಅಡಳಿತದ ಚುಕ್ಕಾಣಿ ಹಿಡಿದಿರುವ ಅವರನ್ನು ಮಣಿಸಲು ಈ ಬಾರಿ ಸಹಕಾರ ಭಾರತಿ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ, ಅವರ ನಿರೀಕ್ಷೆ ವಿಫಲವಾಗಿದೆ. ಬ್ಯಾಂಕ್‌ನಲ್ಲಿ ಮತ್ತೆ ಮಂಜುನಾಥ ಗೌಡರ ಬಣದ ಆದಿಪತ್ಯ ಮುಂದುವರಿದಿದೆ.

ADVERTISEMENT

ಆಯ್ಕೆಯಾದವರು:

ಭದ್ರಾವತಿ ತಾಲ್ಲೂಕು: ಎಲ್‌.ಷಡಾಕ್ಷರಿ, ಪಡೆದ ಮತಗಳು 79, (ಪ್ರತಿಸ್ಪರ್ಧಿ: ಎನ್‌.ಜಿ.ಮಹೇಂದ್ರ ಗೌಡ–6).
ತೀರ್ಥಹಳ್ಳಿ ತಾಲ್ಲೂಕು: ಬಸವಾನಿ ಜಯದೇವ್, ಪಡೆದ ಮತಗಳು 13, (ಪ್ರತಿಸ್ಪರ್ಧಿ ಎಚ್‌.ಆರ್.ನವೀನ್–9).
ಸೊರಬ ತಾಲ್ಲೂಕು: ಎನ್‌.ಎಚ್‌.ಶ್ರೀಪಾದ ರಾವ್ ನಿಸರಾಣಿ, ಪಡೆದ ಮತಗಳು 9, (ಪ್ರತಿಸ್ಪರ್ಧಿ: ಎಂ.ಆರ್.ಅಶೋಕ್–7).
ಸಾಗರ ತಾಲ್ಲೂಕು: ಎಚ್‌.ಕೆ.ವೆಂಕಟೇಶ್, ಪಡೆದ ಮತಗಳು 16, (ಪ್ರತಿಸ್ಪರ್ಧಿ: ಕೆ.ಕೆ.ರಾಜೇಶ್–3).

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಶಿವಮೊಗ್ಗ ಉಪ ವಿಭಾಗ: ಆರ್‌.ಎಂ.ಮಂಜುನಾಥ ಗೌಡ, ಪಡೆದ ಮತಗಳು 13, (ಪ್ರತಿಸ್ಪರ್ಧಿ: ಜಿ.ವಿರೂಪಾಕ್ಷಪ್ಪ–4).

ಸಾಗರ ಉಪ ವಿಭಾಗ: ಜಿ.ಎನ್‌.ಸುಧೀರ್, ಪಡೆದ ಮತಗಳು 14, (ಪ್ರತಿಸ್ಪರ್ಧಿ: ಕೆ.ಕೀರ್ತಿರಾಜ್–13).

ಪಟ್ಟಣ ಸಹಕಾರ ಬ್ಯಾಂಕ್‌ಗಳು, ಪತ್ತಿನ ಸಹಕಾರ ಸಂಘಗಳು:
ಸಾಗರ ಉಪ ವಿಭಾಗ: ಎಂ.ಬಿ.ಚನ್ನವೀರಪ್ಪ, ಪಡೆದ ಮತಗಳು 24, (ಪ್ರತಿಸ್ಪರ್ಧಿ: ಎಚ್‌.ಎಸ್.ರವೀಂದ್ರ–18).

ಇತರೆ ಸಹಕಾರ ಸಂಘಗಳು:
ಶಿವಮೊಗ್ಗ ಉಪ ವಿಭಾಗ: ಜಿ.ಪಿ.ಯೋಗೀಶ್, ಪಡೆದ ಮತಗಳು 32, (ಸಮೀಪದ ಸ್ಪರ್ಧಿ: ಕೆ.ಬಿ.ರವಿಶಂಕರ್–23).
ಸಾಗರ ಉಪ ವಿಭಾಗ: ಬಿ.ಡಿ.ಭೂಕಾಂತ್, ಪಡೆದ ಮತಗಳು 48, (ಪ್ರತಿಸ್ಪರ್ಧಿ: ಬಿ.ಎಂ.ಫಾಲಾಕ್ಷಪ್ಪ–36).

ಅವಿರೋಧ ಆಯ್ಕೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.ದುಗ್ಗಪ್ಪಗೌಡ (ಶಿವಮೊಗ್ಗ ತಾ), ಎಂ.ಎಂ.ಪರಮೇಶ್ (ಹೊಸನಗರ ತಾ), ಅಗಡಿ ಅಶೋಕ್ (ಶಿಕಾರಿಪುರ ತಾ), ಎಸ್‌.ಪಿ.ದಿನೇಶ್ (ಶಿವಮೊಗ್ಗ ಉಪ ವಿಭಾಗ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.