ADVERTISEMENT

ಸೊರಬ: ಸಂಭ್ರಮದ ದಸರಾ ಉತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 6:11 IST
Last Updated 8 ಅಕ್ಟೋಬರ್ 2021, 6:11 IST
ಸೊರಬದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದಸರಾ ಉತ್ಸವ ಆಚರಣಾ ಸಮಿತಿಯಿಂದ ಸಾರ್ವಜನಿಕ ದಸರಾ ಉತ್ಸವ ಅಂಗವಾಗಿ ಗುರುವಾರ ದುರ್ಗಾ ದೇವಿಯ ಪ್ರತಿಷ್ಠಾಪನೆ ನೆರವೇರಿತು
ಸೊರಬದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದಸರಾ ಉತ್ಸವ ಆಚರಣಾ ಸಮಿತಿಯಿಂದ ಸಾರ್ವಜನಿಕ ದಸರಾ ಉತ್ಸವ ಅಂಗವಾಗಿ ಗುರುವಾರ ದುರ್ಗಾ ದೇವಿಯ ಪ್ರತಿಷ್ಠಾಪನೆ ನೆರವೇರಿತು   

ಸೊರಬ: ದಸರಾ ಉತ್ಸವ ಆಚರಣಾ ಸಮಿತಿಯಿಂದ ತಾಲ್ಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಸಾರ್ವಜನಿಕ ದಸರಾ ಉತ್ಸವ ಗುರುವಾರ ಧಾರ್ಮಿಕ ವಿಧಿ–ವಿಧಾನಗಳೊಂದಿಗೆನೆರವೇರಿತು.

ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದುರ್ಗಾ ದೇವಿಯ ಪ್ರತಿಷ್ಠಾಪನೆಯೊಂದಿಗೆತಹಶೀಲ್ದಾರ್ ಶಿವಾನಂದ ಪಿ. ಠಾಣೆ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಕೊರೊನಾ ಕಾರಣ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸಮಿತಿ ತೀರ್ಮಾನಿಸಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಗಿದೆ. ‌

ADVERTISEMENT

ಒಂಬತ್ತು ದಿನಗಳ ಕಾಲ ಪೂಜಾ ವಿಧಿವಿಧಾನಗಳು ನಡೆಯಲಿವೆ. ಕಲಾವಿದ ಕೆ.ಎನ್. ರಾಘು ನಿರ್ಮಾಣ ಮಾಡಿದ ದುರ್ಗಾದೇವಿಯ ಮೂರ್ತಿಯನ್ನು ಇಲ್ಲಿನ ಶಿರಾಳಕೊಪ್ಪ ರಸ್ತೆಯಿಂದ ರಾಜಬೀದಿ ಮಾರ್ಗವಾಗಿ ಪ್ರತಿಷ್ಠಾಪನಾ ಸ್ಥಳದವರೆಗೂ ಕರೆತರಲಾಯಿತು. ಹೊಡಭಟ್ಟೆ ಸುಬ್ಬರಾಯಭಟ್ಟರು, ಸತ್ಯನಾರಾಯಣರಾವ್ ಹಾಗೂ ವೆಂಕಟಗಿರಿ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಎನ್. ಷಣ್ಮುಖಾಚಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪ್ರಶಾಂತ್ ಹುಣವಳ್ಳಿ, ಖಜಾಂಚಿ ಸತೀಶ್ ಬೈಂದೂರು, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ವೀರೇಶ್ ಮೇಸ್ತ್ರಿ, ಯು. ನಟರಾಜ್, ಪ್ರಭು, ಆಫ್ರೀನ್, ಜಯಲಕ್ಷ್ಮೀ, ಆಶ್ರಯ ಸಮಿತಿ ಸದಸ್ಯರಾದ ಪ್ರಭು, ಶಿವು, ಪ್ರಮುಖರಾದ ಎಚ್.ಎಸ್. ಮಂಜಪ್ಪ, ಎಂ.ಎನ್. ಗುರುಮೂರ್ತಿ, ಪ್ರಭಾಕರ ರಾಯ್ಕರ್, ಪಾಣಿರಾಜಪ್ಪ, ದಿವಾಕರ ಭಾವೆ, ಎಚ್. ಗುರುಮೂರ್ತಿ, ಡಿ.ಎಸ್. ಶಂಕರ್ ಶೇಟ್, ಮಹೇಶ್ ಖಾರ್ವಿ, ಶ್ರೀಧರ್, ಸುಬ್ಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.