ADVERTISEMENT

ಈದ್ ಸಂಭ್ರಮಕ್ಕೆ ಸಜ್ಜಾದ ಶಿವಮೊಗ್ಗ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 15:18 IST
Last Updated 9 ನವೆಂಬರ್ 2019, 15:18 IST
ಶಿವಮೊಗ್ಗದ ಅಮೀರ್ ಅಹಮದ್‌ ವೃತ್ತದ ಮಸೀದಿ.
ಶಿವಮೊಗ್ಗದ ಅಮೀರ್ ಅಹಮದ್‌ ವೃತ್ತದ ಮಸೀದಿ.   

ಶಿವಮೊಗ್ಗ: ಈದ್‌ ಮಿಲಾದ್ ಅಂಗವಾಗಿ ಶನಿವಾರ ಶಿವಮೊಗ್ಗದ ಮಸೀದಿಗಳು, ಪ್ರಮುಖ ವೃತ್ತಗಳು, ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಈದ್-ಮಿಲಾದ್ ಹಬ್ಬವನ್ನು ಶಾಂತಿತ, ಸುವ್ಯವಸ್ಥೆಯಿಂದ ಆಚರಿಸಲು ಮುಸ್ಲಿ ಸಮಾಜದ ಜನರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಹಬ್ಬದ ಸಮಯದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪು ಹೊರ ಬಂದಿರುವ ಪರಿಣಾಮ ಭಾನುವಾರನಡೆಯುವ ಮೆರವಣಿಗೆಗೆ ಹೆಚ್ಚಿನ ಪೊಲೀಸರನ್ನು ನಿತೋಜಿಸಲಾಗಿದೆ. ಶಾಂತಿ ಕದಡದಂತೆ ತಾಕೀತು ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.