ADVERTISEMENT

ಪ್ರಸನ್ನಗಣಪತಿ ದೇವಸ್ಥಾನ: 22ರಿಂದ ವೀಣಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:49 IST
Last Updated 19 ಡಿಸೆಂಬರ್ 2019, 10:49 IST

ಶಿವಮೊಗ್ಗ:ರವೀಂದ್ರನಗರದ ಪ್ರಸನ್ನಗಣಪತಿ ದೇವಸ್ಥಾನದಲ್ಲಿಡಿ.22ರಿಂದ 28ರವರೆಗೆ ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್, ಗುರುಗುಹ ಸಂಗೀತ ವಿದ್ಯಾಲಯ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು 22ರಂದು ಸಂಜೆ 5.30ಕ್ಕೆ ಮತ್ತೂರಿನ ಬೋಧ ನಂದೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಮುಖಂಡರಾದ ಎಂ.ಭಾರದ್ವಾಜ್, ಎಸ್.ಎಸ್.ಜ್ಯೋತಿಪ್ರಕಾಶ್,ಮ.ಸ.ನಂಜುಂಡಸ್ವಾಮಿ, ಎಸ್.ದಿವಾಕರ್ ಉಪಸ್ಥಿತರಿರುವರು ಎಂದುಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಶೃಂಗೇರಿ ಹೆಚ್.ಎಸ್.ನಾಗರಾಜ್ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.28 ರಂದು ಸಂಜೆ 5.30ಕ್ಕೆಸಮಾರೋಪ ನಡೆಯಲಿದೆ. ಮಾಜಿ ಶಾಸಕಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮುಖಂಡರಾದ ಅಚ್ಚುತರಾವ್ ಪದಕಿ, ರಮಾ ವಿ.ಬೆಣ್ಣೂರ್‌ ಭಾಗವಹಿಸುವರು.ಪ್ರತಿದಿನ ಸಂಜೆ 7ಕ್ಕೆವೀಣಾನಾದ ಯಜ್ಞ ಕಾರ್ಯಕ್ರಮ ಆರಂಭವಾಗಲಿದೆ. 22ರಂದು ಎಸ್.ಜಿ.ಭಾಗ್ಯಲಕ್ಷ್ಮಿ ತಂಡ, 23ರಂದು ಭರದ್ವಾಜ್ ರಾಮನ್, 24ರಂದು ಬಿ.ಕೆ.ವಿಜಯಲಕ್ಷ್ಮಿ, 25ರಂದು ಸ್ಥಳೀಯ ಯುವವಾಣಿ ವಾಹಿನಿ ಹಾಗೂ ಲಲಿತಾ ಕೃಷ್ಣನ್, 26 ರಂದು ರಾಮನಾಥ ಅಯ್ಯರ್, 27ರಂದು ಶೋಭನಾ ಸ್ವಾಮಿನಾಥನ್ ತಂಡ ಕಾರ್ಯಕ್ರಮ ನಡೆಸಿಕೊಡಲಿವೆಎಂದು ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸುಮಂಗಲಾ ಸೀತಾರಾಮ್, ಸಹನಾ ರಮೇಶ್, ನಂದಿನಿ, ಸಮ್ಮಿತ್ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.