ಪ್ರಾತಿನಿಧಿಕ ಚಿತ್ರ
ಶಿವಮೊಗ್ಗ: ಸೇನೆಗೆ ಸೇರಲು ಬಯಸುವ ಆಸಕ್ತ ಯುವಕ/ಯುವತಿಯರಿಗಾಗಿ ಶಿವಮೊಗ್ಗದಲ್ಲಿ ಜೂ. 21 ರಂದು ಬೆಳಿಗ್ಗೆ 9ಕ್ಕೆ ಮಂಗಳೂರು ಸೇನಾ ನೇಮಕಾತಿ ಕಚೇರಿಯ ನಿರ್ದೇಶಕರಿಂದ ಮಾರ್ಗದರ್ಶನ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿದ್ಯಾರ್ಹತೆಯ ವಿವರಗಳನ್ನು ವಾಟ್ಸಪ್ ನಂಬರ್ 9591894552 ಗೆ ಕೇವಲ ವಾಟ್ಸಪ್ ಮೇಸೇಜ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಿಕೊಂಡವರು ಮಾರ್ಗದರ್ಶನ ಉಪನ್ಯಾಸಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿ/ಮಾರ್ಪಾಡುಗಳನ್ನು ತಮ್ಮ ವಾಟ್ಸಪ್ ಸಂಖ್ಯೆಗೆ ಅಗತ್ಯವಿದ್ದಲ್ಲಿ ತಿಳಿಸಲಾಗುವುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.