ADVERTISEMENT

ಧಾರ್ಮಿಕ ಆಚರಣೆಯಿಂದ ಸುಖ, ಶಾಂತಿ, ನೆಮ್ಮದಿ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:56 IST
Last Updated 3 ಜೂನ್ 2025, 13:56 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ಮಹಾಯಾಗ ಕಾರ್ಯಕ್ರಮದಲ್ಲಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ಮಹಾಯಾಗ ಕಾರ್ಯಕ್ರಮದಲ್ಲಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ಸೊರಬ: ಜಗತ್ತಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸಿ ಧಾರ್ಮಿಕ ಕೈಂಕರ್ಯ ನಡೆಸಲಾಗುತ್ತದೆ. ನಿಷ್ಫಲ ಭಾವದಿಂದ ಕೈಂಕರ್ಯಗಳನ್ನು ಮಾಡಿದಾಗ ಭಗವಂತನ ಚಿಂತನೆಯು ಸಾಫಲ್ಯವಾಗುತ್ತದೆ ಎಂದು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಂದ್ರಗುತ್ತಿಯ ರೇಣುಕಾಂಬಾ ದೇವಸ್ಥಾನದ ಆವರಣದಲ್ಲಿ ನಾರಾಯಣ ಗುರುಧರ್ಮ ಪರಿಪಾಲನಾ ಸಂಘ ಮತ್ತು ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ಮಹಾಯಾಗದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಧರ್ಮವೆಂಬುದು ಸರ್ವರನ್ನೂ ಸಹೋದರ ಭಾವದಿಂದ ಕಾಣುವಂತಹುದಾಗಿದೆ. ಮನಸ್ಸಿನ ವಿಕಲ್ಪಗಳು ದೂರವಾಗಿ ಜ್ಞಾನ ಮತ್ತು ಧರ್ಮದ ಹಾದಿಯಲ್ಲಿ ನಡೆಯುವಂತಾಗಬೇಕು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಬದುಕಬೇಕು ಎಂಬ ಸಂದೇಶವನ್ನು ಸಂತರು ಸಾರಿದ್ದಾರೆ ಎಂದರು.

ADVERTISEMENT

ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿದರು. ಇದಕ್ಕೂ ಮೊದಲು ನಡೆದ ವಿಶ್ವ ಮಹಾಯಾಗಕ್ಕೆ ಸಿಗಂಧೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಚಾಲನೆ ನೀಡಿದರು.

ಸೈದಪ್ಪ ಕೆ. ಗುತ್ತೆದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಎಸ್‍ಎನ್‍ಡಿಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಹಿರಿಯಾವಲಿ, ಕೆ.ಎಸ್.ಪ್ರಶಾಂತ್ ಸಾಗರ, ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಶ್ರೀಧರ್, ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಲೋಕೇಶ್, ಎಸ್.ಡಿ.ನಾಯಕ್, ಚಂದ್ರಪ್ಪ ಕಲಸೆ, ನಾಗರಾಜ್ ಕೈಸೋಡಿ, ಶಿವಕುಮಾರ ಕಡಸೂರು, ವಸಂತ್ ನಾಯ್ಕ, ಹರೀಶ್, ಲೋಕೇಶ್, ರವಿದಾಸ್, ಚರಿತ್, ಲೇಖನಾ, ನವೀನ್ ಚಂದ್ರ, ಭಾವನಾ ತೌಡತ್ತಿ, ಅನುಸೂಯ, ಮಂಜುನಾಥ್, ಶಿವರಾಜ್ ನಾಯ್ಕ, ಸತೀಶ್, ಸೋಮನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.