ADVERTISEMENT

ಶಿಕಾರಿಪುರ–ಶಿರಾಳಕೊಪ್ಪ ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 7:36 IST
Last Updated 24 ಜುಲೈ 2021, 7:36 IST
ಶಿಕಾರಿಪುರ ಕುಮದ್ವತಿ ನದಿ ಸಮೀಪದ ಗೌರಿಹಳ್ಳ ಶುಕ್ರವಾರ ಸಂಪೂರ್ಣ ಭರ್ತಿಯಾದ ಪರಿಣಾಮ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದೆ
ಶಿಕಾರಿಪುರ ಕುಮದ್ವತಿ ನದಿ ಸಮೀಪದ ಗೌರಿಹಳ್ಳ ಶುಕ್ರವಾರ ಸಂಪೂರ್ಣ ಭರ್ತಿಯಾದ ಪರಿಣಾಮ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದೆ   

ಶಿಕಾರಿಪುರ: ತಾಲ್ಲೂಕಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಪಟ್ಟಣದ ಕುಮದ್ವತಿ ನದಿ ಸಮೀಪವಿರುವ ಗೌರಿಹಳ್ಳ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಮಾರ್ಗದ ವಾಹನ ಸಂಚಾರ ರದ್ದುಗೊಳಿಸಲಾಗಿದೆ.

ಕುಮದ್ವತಿ ನದಿ ಹಾಗೂ ಗೌರಿಹಳ್ಳ ಸಮೀಪವಿರುವ ಕೃಷಿ ಭೂಮಿಗೆ ನೀರು ನುಗ್ಗಿದೆ. ನದಿ ಸಮೀಪವಿರುವ ರುದ್ರಭೂಮಿ ಜಲಾವೃತವಾಗಿದೆ. ಗೌರಿಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ವೀಕ್ಷಿಸಲು ನೂರಾರು ಜನರು ಜಮಾಯಿಸಿದ್ದ ದೃಶ್ಯ ಕಂಡು ಬಂದಿತು.

ಮಾಸೂರು ರಸ್ತೆ ಪಕ್ಕದಲ್ಲಿರುವ ಸೊಪ್ಪಿನಕೆರೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದಿದ್ದು, ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ADVERTISEMENT

ತಾಲ್ಲೂಕಿನ ಮಾರವಳ್ಳಿ ಗ್ರಾಮದಲ್ಲಿರುವ ಕಿಟ್ಟದ ಕೆರೆ ಭರ್ತಿಯಾಗಿದ್ದು, ರಸ್ತೆ ಮೇಲೆ ನೀರು ಹರಿದಿದೆ. ಬೇಗೂರು ಗ್ರಾಮದ ಹಿರೇಕೆರೆ ಭರ್ತಿಯಾಗಿ ಗ್ರಾಮದ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ. ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೊಡಿ ಮೇಲೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ಕುಮದ್ವತಿ ನದಿ ನೀರು ಕೊಟ್ಟ ಗ್ರಾಮದ ಕೆಲ ಮನೆಗಳಿಗೆ ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.