ADVERTISEMENT

ತೀರ್ಥಹಳ್ಳಿ|ಧಾರಾಕಾರ ಮಳೆ; ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:45 IST
Last Updated 24 ಮೇ 2025, 13:45 IST
ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ
ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ   

ತೀರ್ಥಹಳ್ಳಿ: ತಾಲ್ಲೂಕಿನ ಸುತ್ತಮುತ್ತ ಶನಿವಾರ ಜೋರಾಗಿ ಬೀಸುವ ಗಾಳಿಯ ಜೊತೆಗೆ ಧಾರಾಕಾರ ಮಳೆಯಾಗುತ್ತಿದೆ. ಆಗುಂಬೆ ಹೋಬಳಿಯಲ್ಲಿ ಮಳೆಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ.

ಆಗುಂಬೆಯಲ್ಲಿ ಶನಿವಾರ 80 ಮಿ.ಮೀ. ಮಳೆಯಾಗಿದೆ. ಗ್ರಾಮೀಣ ಭಾಗಗಳು ಮಳೆಗೆ ಸಜ್ಜಾಗದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಜೆಜೆಎಂ ಯೋಜನೆಯಡಿ ರಸ್ತೆಯ ಇಕ್ಕೆಲಗಳಲ್ಲಿ ಎಚ್‌ಡಿಪಿ ಪೈಪ್‌ ಅಳವಡಿಸಲಾಗಿದೆ. ಗುಂಡಿಗಳು ಅರ್ಧಕ್ಕೆ ಮುಚ್ಚಲಾಗಿದ್ದು, ಹಲವು ಕಡೆಗಳಲ್ಲಿ ವಾಹನಗಳು ಗುಂಡಿಗೆ ಬೀಳುತ್ತಿವೆ.

ಹೊನ್ನೇತ್ತಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಾರು ಗ್ರಾಮದ ಸುಪ್ರೀತ್‌ ಭಟ್‌ ಅವರ ಭತ್ತದ ಪಣತದ ಮನೆ ಮೇಲೆ ಮಾವಿನ ಮರ ಉರುಳಿ ಹಾನಿ ಸಂಭವಿಸಿದೆ. ಕಸಬಾ ಹೋಬಳಿಯ ತುಡ್ಕಿ ಗ್ರಾಮದ ಮುಕುಂದ ಅವರ ಮನೆ ಮೇಲೆ ಮರ ಬಿದ್ದು ಗೋಡೆ, ಹೆಂಚಿಗೆ ಹಾನಿಯಾಗಿದೆ. ಹಾನಿ ಸ್ಥಳಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT
ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇತ್ತಾಳು ಗ್ರಾಮದಲ್ಲಿ ಜಾನುವಾರು ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.