ADVERTISEMENT

ಹೊಳೆಹೊನ್ನೂರು | ಚಂಡಿಕಾ ಹೋಮ: ಕೆ.ಎಸ್.ಈಶ್ವರಪ್ಪ ಭಾಗಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:46 IST
Last Updated 17 ಏಪ್ರಿಲ್ 2024, 15:46 IST
ಹೊಳೆಹೊನ್ನೂರಿನಲ್ಲಿ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು
ಹೊಳೆಹೊನ್ನೂರಿನಲ್ಲಿ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು   

ಹೊಳೆಹೊನ್ನೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯಿತು.

ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆಯಬೇಕು’ ಎಂದರು. 

‘ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಕನಸು ಹೊಂದಿದ್ದು, ಎಲ್ಲಾ ವರ್ಗದ ಜನರ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತೇನೆ. ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಮತಯಾಚನೆಗೆ ಮತ್ತೊಮ್ಮೆ ಗ್ರಾಮದಲ್ಲಿ ಬರುತ್ತೇನೆ’ ಎಂದರು.

ADVERTISEMENT

ಸ್ಥಳೀಯ ಮುಖಂಡರಾದ ಎಚ್.ಎಸ್.ವಸಂತಕುಮಾರ್, ಪಿ.ಶಂಕರ್, ಎಚ್.ಜಿ.ವೆಂಕಟೇಶ್, ಎಂ.ಹರೀಶ್‌ಕುಮಾರ್, ಡಿ.ಬಿ.ಹಳ್ಳಿ ಬಸವರಾಜ್, ಕೊಟ್ರೇಶ್, ಚಂದ್ರು, ಮಂಜುನಾಥ್, ಶಿವಕುಮಾರ್, ಧಶರಥ, ಮಂಜಮ್ಮ ದೇವಸ್ಥಾನ ಸಮಿತಿ ಯಜಮಾನರು ಹಾಗೂ ಭಕ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.