ADVERTISEMENT

ಶಿವಮೊಗ್ಗ: ಪಾಲಿಕೆ ಜಾಗದಲ್ಲಿ ಮನೆ, ಹಕ್ಕುಪತ್ರಕ್ಕೆ ಕ್ರಮ

ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 3:38 IST
Last Updated 29 ಅಕ್ಟೋಬರ್ 2020, 3:38 IST
ಶಿವಮೊಗ್ಗದ ನಗರದ ಆಶ್ರಯ ಸಮಿತಿ ಕಚೇರಿಯನ್ನು ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಉದ್ಘಾಟಿಸಿದರು
ಶಿವಮೊಗ್ಗದ ನಗರದ ಆಶ್ರಯ ಸಮಿತಿ ಕಚೇರಿಯನ್ನು ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಉದ್ಘಾಟಿಸಿದರು   

ಶಿವಮೊಗ್ಗ: ಗ್ರಾಮೀಣ, ನಗರ ಹಾಗೂ ಪಾಲಿಕೆ ಜಾಗದಲ್ಲಿ ಯಾರು ಎಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೋ ಆ ಮನೆಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಶ್ರಯ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಆಶ್ರಯ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಮೂಲಕ ಭೂಮಿ ಖರೀದಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸಬ್ಸಿಡಿ ಕೊಟ್ಟು ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಕೊಡಿಸಿ ಕಡುಬಡವರಿಗೆ ಮನೆ ಕಟ್ಟಿಕೊಡಬೇಕು ಎನ್ನುವುದು ಸಮಿತಿ ಆಶಯ ಎಂದು
ತಿಳಿಸಿದರು.

ADVERTISEMENT

ಈಗಾಗಲೇ ಈ ಯೋಜನೆ ಮೂಲಕ ವಿರೂಪಿನಕೊಪ್ಪದಲ್ಲಿ ಭೂಮಿ ಖರೀದಿ ಮಾಡಿ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುವ 680 ಮಹಿಳೆಯರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಈ ಹಿಂದೆ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ಸಮಿತಿಯಿಂದ ಭೂಮಿ ಖರೀದಿ ಮಾಡಿ ಮನೆ ಇಲ್ಲದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಕೊಡುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ನಗರಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆ, ಬಿಜೆಪಿ ಮುಖಂಡರಾದ ಎಸ್. ದತ್ತಾತ್ರಿ, ಎಸ್. ಜ್ಞಾನೇಶ್ವರ್, ಎನ್.ಜೆ. ರಾಜಶೇಖರ್, ವಿಶ್ವಾಸ್ ಹಾಗೂ
ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಸದಸ್ಯರಾದ ರೇಣುಕಾ ನಾಗರಾಜ್, ಲಕ್ಷ್ಮಣ್, ಯಶೋಧರ ಹೆಗಡೆ, ಮಹಾಲಿಂಗಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.