ADVERTISEMENT

ಹಲ್ಕೆ- ಮುಪ್ಪಾನೆ ಲಾಂಚ್ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 1:38 IST
Last Updated 1 ಜುಲೈ 2022, 1:38 IST
ಹಲ್ಕೆ– ಮುಪ್ಪಾನೆ ಲಾಂಚ್
ಹಲ್ಕೆ– ಮುಪ್ಪಾನೆ ಲಾಂಚ್   

ತುಮರ: ದ್ವೀಪದ ಕರೂರು ಹೋಬಳಿಯಿಂದ ಕಾರ್ಗಲ್, ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ– ಮುಪ್ಪಾನೆ ಲಾಂಚ್ ಮಾರ್ಗ ಶುಕ್ರವಾರದಿಂದ ಪುನರಾರಂಭಗೊಳ್ಳಲಿದೆ.

‘ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಇದ್ದುದರಿಂದ ಕಳೆದ ತಿಂಗಳು ಲಾಂಚ್ ಸಂಚಾರವನ್ನು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ತಾಲ್ಲೂಕು ಸೇರಿ ದ್ವೀಪದ ಶರಾವತಿ ಹಿನ್ನೀರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಹೀಗಾಗಿ, ನೀರಿನ ಹರಿವಿನ ಪ್ರಮಾಣ ನಿಧಾನಗತಿಯಲ್ಲಿ ಏರುತ್ತಿದ್ದು, ಲಾಂಚ್ ಸಂಚಾರಕ್ಕೆ ಅನುಕೂಲ ಆಗಿದೆ. ಹೀಗಾಗಿ ಲಾಂಚ್ ಸೇವೆ ಆರಂಭಿಸಲಾಗಿದೆ’ ಎಂದು ಕಡವು ನಿರೀಕ್ಷಕ ಧನೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT