ಶಿವಮೊಗ್ಗ: ನ್ಯಾ. ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮೇ 5ರಿಂದ ಆರಂಭಗೊಳ್ಳಲಿದೆ. ಮನೆ ಮನೆಗೆ ಬಂದು ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬೇಡ ಜಂಗಮ ಸಮಾಜ ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇದ್ದು, ಧಾರ್ಮಿಕ ಭಿಕ್ಷುಕ ಕುಲಕಸುಬು ವೃತ್ತಿಯ ಸಮಾಜವಾಗಿದ್ದು, ಈ ಸಮಾಜದ ಸಂಪೂರ್ಣ ಸಮೀಕ್ಷೆ ಕೂಡ ಅಷ್ಟೇ ಪ್ರಾಮುಖ್ಯವಾಗಿದೆ. ಸಮೀಕ್ಷೆ ಕಾರ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗೆ ಈ ಸಮಾಜದ ಮನೆ ಮನೆಗೆ ಬಂದು ಸಮೀಕ್ಷೆ ನಡೆಸಲು ಸ್ಪಷ್ಟ ನಿರ್ದೇಶನ ನೀಡಬೇಕೆಂದು ಜಿಲ್ಲಾ ಬೇಡ ಜಂಗಮ ಸಮಾಜ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ವೇ. ಎಚ್. ಮಲ್ಲಿಕಾರ್ಜುನಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಪ್ರಮುಖರಾದ ಎ.ಎಂ. ಚಂದ್ರಯ್ಯ, ಎಚ್.ಎಂ. ಸಂಗಯ್ಯ, ಶಿವಕುಮಾರ್, ಲೋಕೇಶ್ ದೊಡ್ಡಮಠ, ಸುನಂದಾ ಎಂ.ಕೆ., ಪ್ರೇಮಾ, ಜ್ಯೋತಿ ನಾಗರಾಜಯ್ಯ, ಸೋಮಶೇಖರಯ್ಯ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.