ಸಾಗರ: ಇಲ್ಲಿನ ಕಲಾ ಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ತಂಡ ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಸ್ಪರ್ಧೆಯ ಜಾನಪದ ನೃತ್ಯ ವಿಭಾಗದಲ್ಲಿ ಡೊಳ್ಳು ಕುಣಿತ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿದೆ.
ಸಣ್ಣಪ್ಪ ಎಸ್.ಬಿ., ಗವಿಯಪ್ಪ ಎಲ್.ಟಿ, ಹೂವಪ್ಪ ಕೆ.ವಿ. ಮಹೇಶ್ ಎಚ್.ಬಿ. ಜಯಪ್ಪ ಡಿ. ರಾಚಪ್ಪ ಎನ್.ಜಿ, ಕೃಷ್ಣಮೂರ್ತಿ ಎಂ.ಪಿ. ದಿನೇಶ್ ಎನ್.ಎಸ್. ಪ್ರಥಮ ಸ್ಥಾನ ಪಡೆದ ಡೊಳ್ಳು ಕುಣಿತದ ತಂಡದಲ್ಲಿದ್ದರು.
400 ಮೀ. ಓಟದ ಸ್ಪರ್ಧೆಯಲ್ಲಿ ಮೂರ್ತಿ ಬಿ. ಪ್ರಥಮ, 800 ಮೀ. ಓಟದಲ್ಲಿ ದ್ವಿತೀಯ, ಶೈಲಜಾ ಥ್ರೋಬಾಲ್‌ನಲ್ಲಿ ದ್ವಿತೀಯ, ಪ್ರೇಮಾ ಫಿಲೋಮಿನಾ ಟೆನ್ನಿಕಾಯ್ಟ್ ಸಿಂಗಲ್ಸ್‌ನಲ್ಲಿ ಪ್ರಥಮ, ಮಂಜುಳ ಟೆನ್ನಿಕಾಯ್ಟ್ ಡಬಲ್ಸ್‌ನಲ್ಲಿ ಪ್ರಥಮ, ನವೀನ ಸಿ. ರಶ್ಮಿ ಥ್ರೊಬಾಲ್‌ನಲ್ಲಿ ದ್ವಿತೀಯ, ಶ್ಯಾಮ್ ಸುಂದರ್, ವಿನಯಕುಮಾರ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.