
ಪ್ರಜಾವಾಣಿ ವಾರ್ತೆಶಿವಮೊಗ್ಗ: ತಾಲ್ಲೂಕಿನಶಂಕರ ಅರಣ್ಯ ವಲಯ ವ್ಯಾಪ್ತಿಯ ಕೊನಗವಳ್ಳಿ ರೈಲು ಹಳಿಯ ಬಳಿ ಗುರುವಾರ ಚಿರತೆಯ ಶವ ಪತ್ತೆಯಾಗಿದೆ.
ಸುಮಾರು ಆರು ವರ್ಷದ ಚಿರತೆಯ ತಲೆ ಮತ್ತು ದೇಹದ ಎಡ ಭಾಗದಲ್ಲಿ ಗಾಯಗಳಾಗಿವೆ.ಶಿವಮೊಗ್ಗ–ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಖಚಿತ ಮಾಹಿತಿ ಸಿಗಲಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಸಿ.ಜಯೇಶ್,ದಿನೇಶ್ಮಾಹಿತಿ ನೀಡಿದರು.
ಹುಲಿ ಮತ್ತು ಸಿಂಹಧಾಮದ ವನ್ಯಜೀವಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.