ADVERTISEMENT

ಪಾಲಿಕೆಯಲ್ಲಿ ಬಿಜೆಪಿ ಆಡಳಿತ; ತುಂಬಿತು ವರ್ಷ

ಜನಪರ, ಅಭಿವೃದ್ಧಿ ಕಾರ್ಯಕ್ಕೆ ಒತ್ತು: ಉಪ ಮೇಯರ್ ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:16 IST
Last Updated 10 ಡಿಸೆಂಬರ್ 2019, 13:16 IST
ಎಸ್‌.ಎನ್‌. ಚನ್ನಬಸಪ್ಪ
ಎಸ್‌.ಎನ್‌. ಚನ್ನಬಸಪ್ಪ   

ಶಿವಮೊಗ್ಗ: ಬಿಜೆಪಿ ನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದು ವರ್ಷ ತುಂಬಿದೆ. ವರ್ಷದ ಅವಧಿಯಲ್ಲಿ ಸಾಕಷ್ಟು ಜನಪರ, ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಉಳಿದ 4 ವರ್ಷಗಳಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಾಗುವುದು ಎಂದು ಉಪ ಮೇಯರ್ ಎಸ್‌.ಎನ್.ಚನ್ನಬಸಪ್ಪ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಪಕ್ಷದನಾಯಕರು,ಪಾಲಿಕೆ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮಾರ್ಗದರ್ಶನಮಾಡಿದ್ದಾರೆ.ಜನರ ನಂಬಿಕೆ ಉಳಿಸಿಕೊಂಡ ಸಮಾಧಾನವಿದೆ. ಶಿವಮೊಗ್ಗ ಸುಂದರ ನಗರವಾಗಿಸಲು ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ.ಅದಕ್ಕಾಗಿ 5 ವರ್ಷಗಳ ದೂರ ದೃಷ್ಟಿಯಬಜೆಟ್ ಮಂಡಿಸಿದ್ದೇವೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಉದ್ಯಾನಗಳ ನಿರ್ಮಾಣ, ದುರಸ್ತಿ, ಆಟಿಕೆಗಳು, ಬಡವರಿಗೆ ನಿವೇಶನ, ಕುಡಿಯುವ ನೀರಿನ ಯೋಜನೆ, ಪಾಲಿಕೆಯ ವ್ಯಾಪ್ತಿಗೆ ಸೇರಿದ 21 ಗ್ರಾಮಗಳಲ್ಲಿ ಮೂಲ ಸೌಲಭ್ಯ, ಬೀದಿದೀಪ ನಿರ್ವಹಣೆ,ಸರ್ಕಾರಿಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. 24 ತಾಸು ಕುಡಿಯುವ ನೀರು ಪೂರೈಸುವ

ADVERTISEMENT

ಯೋಜನೆಪೂರ್ಣಗೊಂಡಿದೆ.ಕೆಲವೇ ದಿನಗಳಲ್ಲಿ ನಗರದ ಎಲ್ಲ ಮನೆಗಳಿಗೂ ನೀರು ಸಂಪರ್ಕಕಲ್ಪಿಸಲಾಗುವುದು.ಗಾಜನೂರಿನಿಂದ ಮತ್ತೊಂದು ಹೊಸ ಪೈಪ್‌ಲೈನ್‌ ಅಳವಡಿಸಲು ನಿರ್ಧರಿಸಲಾಗಿದೆ. 2020ರ ಒಳಗೆ ಕುಡಿಯುವ ನೀರಿನ ಸಮಸ್ಯೆ ಇರುವುದೇ ಇಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರವಾಹದ ವೇಳೆ ಪಾಲಿಕೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಎಲ್ಲರೂ ಪಕ್ಷಬೇಧ ಮರೆತು ಸಹಕಾರನೀಡಿದ್ದಾರೆ. ಸಂಘ ಸಂಸ್ಥೆಗಳು ಕೈಜೋಡಿಸಿವೆ.ಅಧಿಕಾರಿಗಳು ಹಗಲಿರುಳು ಶ್ರಮಿಸಿ,ಪರಿಸ್ಥಿತಿ ನಿಬಾಯಿಸಿದ್ದಾರೆ. ಭಾಗಶಃ ಮನೆ ಬಿದ್ದವರಿಗೆ ₨ 10 ಸಾವಿರ, ಪೂರ್ಣ ಮನೆ ಬಿದ್ದವರಿಗೆ ₨ 25 ಸಾವಿ ಪಾಲಿಕೆ ನೀಡಿದೆ ಎಂದರು.

ಒಂದು ವರ್ಷದಲ್ಲಿ 350 ಕಾಮಗಾರಿ ಮಾಡಿದ್ದೇವೆ. 80 ಉದ್ಯಾನಗಳ ಅಭಿವೃದ್ಧಿಯಾಗಿದೆ.₨ 32.44 ಕೋಟಿ ಖರ್ಚಾಗಿದೆ. ಚಿತಾಗಾರ ಅಭಿವೃದ್ಧಿಮಾಡಲಾಗಿದೆ.ಹೈಮಾಸ್ಕ್ ದೀಪ ಅಳವಡಿಸಲಾಗಿದೆ.ಕಸದ ಸಮಸ್ಯೆ ಎಲ್ಲರ ಕಾಲದಲ್ಲಿಯೂ ಇತ್ತು. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅನುಪಿನಕಟ್ಟೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿದ್ದೆವು. ಕಸದ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

‘ಸ್ಮಾರ್ಟ್‌ಸಿಟಿ’ ಕಾಮಗಾರಿಗಳುಜನರಿಗೆಕಿರಿಕಿರಿ ತಂದಿವೆ.ಆರಂಭದಲ್ಲಿ ಇಂತಹ ಸಮಸ್ಯೆಗಳು ಸಹಜ. ಸಾರ್ವಜನಿಕರು ಸಹಕಾರ ನೀಡಬೇಕು.ಎಲ್ಲ ಸಮಸ್ಯೆಗಳೂ ಕಾಲಮಿತಿಯ ಒಳಗೆ ಬಗೆಹರಿಯಲಿವೆ. ಶಿವಮೊಗ್ಗ ಸುಂದರ ನಗರವಾಗಲಿದೆ. ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಲು ಪ್ರತಿ ವಾರ್ಡ್‌ಗಳಲ್ಲೂ ಕಚೇರಿ ತರೆಯಲಾಗುವುದು. ವಿರೋಧ ಪಕ್ಷದ ಸದಸ್ಯರ ಟೀಕೆಗಳಲ್ಲಿ ಯಾವುದೇ ಸತ್ಯವಿಲ್ಲ. ಪಕ್ಷಭೇದ ಮರೆತು ಅಭಿವೃದ್ಧಿಗೆ ಸಹಕಾರ ನೀಡಬೇಕು.ವಿನಾಕಾರಣದ ಟೀಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಲತಾ ಗಣೇಶ್,ಸದ್ಯರಾದ ಜ್ಞಾನೇಶ್ವರ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಸುವರ್ಣ ಶಂಕರ್, ಸುರೇಖಾ ಮುರಳೀಧರ್, ಲತಾ ಅಣ್ಣಪ್ಪ, ಆರತಿ, ವಿಶ್ವಾಸ್, ಮುಖಂಡರಾದನಾಗರಾಜ್, ಜಗದೀಶ್, ಮೋಹನ್ ರೆಡ್ಡಿ, ಅಣ್ಣಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.