ADVERTISEMENT

‘ಮಹಿಳಾ ಉದ್ಯಮಿಗಳಿಗೆ ವಿಪುಲ ಅವಕಾಶ’

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:48 IST
Last Updated 12 ಮೇ 2022, 4:48 IST
ಶಿವಮೊಗ್ಗದ ಬಾಲರಾಜ ಅರಸು ರಸ್ತೆಯಲ್ಲಿ ಸ್ವೇದ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮ ಜಾಗೃತ ಕಾರ್ಯಕ್ರಮವನ್ನು ಮೇಯರ್ ಸುನಿತಾ ಅಣ್ಣಪ್ಪ ಉದ್ಘಾಟಿಸಿದರು.
ಶಿವಮೊಗ್ಗದ ಬಾಲರಾಜ ಅರಸು ರಸ್ತೆಯಲ್ಲಿ ಸ್ವೇದ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮ ಜಾಗೃತ ಕಾರ್ಯಕ್ರಮವನ್ನು ಮೇಯರ್ ಸುನಿತಾ ಅಣ್ಣಪ್ಪ ಉದ್ಘಾಟಿಸಿದರು.   

ಶಿವಮೊಗ್ಗ: ಉದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಶಗಳಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಕ್ಷೇತ್ರ ಪ್ರವೇಶಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಉದ್ಯಮಿ ಲಕ್ಷ್ಮೀದೇವಿ ಗೋಪಿನಾಥ್‌ ಹೇಳಿದರು.

ಬಾಲರಾಜ ಅರಸು ರಸ್ತೆಯಲ್ಲಿ ಸ್ವೇದ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮ ಜಾಗೃತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ಮಹಿಳೆಯರು ಸೇರಿ ಮಹಿಳಾ ಉದ್ದಿಮೆದಾರರನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಬೆಳೆಸಲು ಇಸ್ರೊ ಇಂತಹ ಸಂಸ್ಥೆ ಸ್ಥಾಪಿಸಿದೆ. ಇಂತಹ ಸಿದ್ಧ ಸೇವಾ ಸಂಸ್ಥೆಗಳು ಪ್ರತಿ ವಾರ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಿವೆ ಎಂದರು.

ADVERTISEMENT

ಉತ್ಪನ್ನ ತಯಾರಿಕೆಗೂ, ಮಾರುಕಟ್ಟೆಗೂ ಅಂತರವಿದೆ. ಅಂತರ ಕಡಿಮೆ ಮಾಡಲು ಮಹಿಳಾ ಸ್ವೇದ ಗ್ರಂಥಿಗಳನ್ನು ಆಯೋಜನೆ ಮಾಡಲಾಗುವುದು. ಶಿವಮೊಗ್ಗ ಜನರು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಉದ್ದಿಮೆಗಳು ಸಿದ್ಧಪಡಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ವಿನಂತಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ‘ಸಂಘವು ಇಂತಹ ಉದ್ದಿಮೆದಾರರನ್ನು ಪ್ರೋತ್ಸಾಹಿಸುತ್ತದೆ. ಸಹಕಾರ ನೀಡುತ್ತದೆ’ ಎಂದರು.

ಮೇಯರ್‌ ಸುನಿತಾ ಅಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್‌. ದತ್ತಾತ್ರಿ, ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ನಿರ್ದೇಶಕ ನಿರಂಜಿನಿ ರವೀಂದ್ರ, ಸಹನಾ ಚೇತನ, ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಉಪಾಧ್ಯಕ್ಷ ಪಿ. ಗೋಪಿನಾಥ್, ಸೋಕಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಎನ್.ವಿ. ಭಟ್, ವೀರಣ್ಣ ಹುಗ್ಗಿ, ಟ್ಯಾಕ್ಸಿ ಸ್ಟ್ಯಾಂಡ್ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಕೈಗಾರಿಕ ಸಂಸ್ಥೆಯ ಜಂಟಿ ನಿರ್ದೇಶಕ ಗಣೇಶ್, ಸಹ ನಿರ್ದೇಶಕ ವೀರೇಶ್‌ ನಾಯಕ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.