ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದ ಶ್ರೀಧರ ಪ್ರಣೀತ ಯೋಗ ವೇದಿಕೆಯಲ್ಲಿ ಜೂನ್ 6ರಿಂದ 8ರವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ನಡೆಯಲಿದೆ ಎಂದು ಶ್ರೀ ಗುರುಕುಲಂ ಯೋಗ ವಿದ್ಯಾ ಕೇಂದ್ರದ ಶ್ರೀಧರಮೂರ್ತಿ ಕಾನುಗೋಡು ತಿಳಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 425 ಯೋಗ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಜೂನ್ 6ರಂದು ಸಂಜೆ 7ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ವಿಕಾಸ್ ವಿ. ಸಿ.ಕೆ.ರಾಘವೇಂದ್ರ, ಜಲೀಲ್ ಸಾಗರ್, ಸಾನ್ವಿ ಜಿ.ಭಟ್, ಕಾವ್ಯ ಕೆ.ಎನ್. ನಮನ ಎಸ್. ಚಂದನ್ ಕೆ.ಆರ್. ಸಂಧ್ಯಾ ಎಂ.ಎಸ್. ಅವರನ್ನು ಸನ್ಮಾನಿಸಲಾಗುವುದು ಎಂದರು.
ಜೂನ್ 7ರಂದು ವಿವಿಧ ವಯೋಮಾನದವರಿಗೆ ಯೋಗ ಸ್ಪರ್ಧೆ ನಡೆಯಲಿದೆ. ಇಲ್ಲಿ ವಿಜೇತರಾದವರು ಜಾರ್ಖಂಡ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತಾರೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಕೃಷ್ಣಮೂರ್ತಿ ಗಡಿಕಟ್ಟೆ, ಗೌತಮ್ ಕೆ.ಎಸ್. ಪ್ರಶಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.