ADVERTISEMENT

ಸಂಘಟನೆಯಿಂದ ಪಕ್ಷ ಬಲವರ್ಧನೆ; ಶಾಸಕ ಎಚ್. ಹಾಲಪ್ಪ ಹರತಾಳು

ಬಿಜೆಪಿ ಮಂಡಲ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:27 IST
Last Updated 1 ಆಗಸ್ಟ್ 2021, 1:27 IST
ಹೊಸನಗರದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿದರು
ಹೊಸನಗರದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಮಾತನಾಡಿದರು   

ಹೊಸನಗರ: ಕಾರ್ಯಕರ್ತರು ಸಂಘಟಿತರಾಗಿ ಪಕ್ಷಕ್ಕೆ ದುಡಿದಾಗ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ. ಪಕ್ಷ ಸದೃಢವಾಗಿದ್ದಲ್ಲಿ ಉತ್ತಮ ಆಡಳಿತ ನಡೆಸಲು ಸಹಕಾರಿ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಹೊಸನಗರ ಮಂಡಲ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರ ಸಾಂಘಿಕ ಹೋರಾಟದ ಪ್ರತೀಕವಾಗಿ ನಡೆದು ಬಂದ ಪಕ್ಷ. ಇಲ್ಲಿ ಕಾರ್ಯಕರ್ತರೇ ಜೀವಾಳ. ದೇಶದಲ್ಲಿ ನರೇಂದ್ರ ಮೋದಿ ಯಶಸ್ವಿ ಆಡಳಿತ ನೀಡಲು ಕಾರ್ಯಕರ್ತರ ಶಕ್ತಿಯೇ ಕಾರಣ. ಪಕ್ಷ ಸದೃಢ ಅಡಿಪಾಯದಲ್ಲಿ ಮೇಲೆದ್ದು ಬಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಾಗುತ್ತದೆ
ಎಂದು ಹೇಳಿದರು.

ADVERTISEMENT

‘ಕಾರ್ಯಕರ್ತರಾದ ನಾವು ಮೊದಲು ಪರಸ್ಪರ ವಿಶ್ವಾಸ ವೃದ್ಧಿಸಿಕೊ
ಳ್ಳಬೇಕು. ನಮ್ಮ ನಮ್ಮಲ್ಲಿ ಒಳಜಗಳ ಇದ್ದಲ್ಲಿ ಪರರಿಗೆ ಅನುಕೂಲವಾಗುವ ಫಲಿತಾಂಶ ಬರುತ್ತದೆ. ನಾವು ಸಂಘಟನೆಯ ಸೂಚನೆಯನ್ನು ಪಾಲಿ
ಸುವ ಗುಣ ಕಲಿತುಕೊಂಡಲ್ಲಿ ಯಾವುದೇ ಯುದ್ಧವನ್ನಾದರೂ ಗೆಲ್ಲಬಹುದು.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮಲ್ಲಿನ ಅಸಮಾಧಾನದಿಂದ ನಾವು ಹೆಚ್ಚು ಸ್ಥಾನ ಗೆಲ್ಲಲಾಗಲಿಲ್ಲ. ನಾವು ಹೆಚ್ಚು ಸ್ಥಾನ ಗೆದ್ದಿದ್ದರೆ ಅಧಿಕಾರ ನಮ್ಮಲ್ಲಿಯೇ ಉಳಿಯುತ್ತಿತ್ತು’ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಕಲ್ಯಾಣದ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು
ಬೇಸರಿಸಿದರು.

ಶಾಸಕ ಆರಗ ಜ್ಞಾನೇಂದ್ರ, ‘ಪಕ್ಷ ನಿಷ್ಠೆ, ಶಿಸ್ತು ನಮ್ಮ ಪಕ್ಷದ ಆಧಾರ ಸ್ತಂಭಗಳು. ನಾವು ಅದನ್ನು ಚಾಚು ತಪ್ಪದೆ ಪಾಲಿಸಬೇಕಾಗಿದೆ. ಆಗ ಮಾತ್ರ ಯಶಸ್ಸು’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಎ.ವಿ. ಮಲ್ಲಿಕಾರ್ಜುನ್, ತಾಲ್ಲೂಕು ಅಧ್ಯಕ್ಷ ಬೆಳಗೋಡು ಗಣಪತಿ, ಎನ್.ಆರ್. ದೇವಾನಂದ್, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ತೀರ್ಥೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.