ADVERTISEMENT

21ಕ್ಕೆ ‘ಕಾಯಕ ದೃಶ್ಯ ಕಾವ್ಯ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 10:52 IST
Last Updated 16 ಜುಲೈ 2019, 10:52 IST

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಜುಲೈ 21ರಂದು ಬೆಳಿಗ್ಗೆ 10.30ಕ್ಕೆ ‘ಕಾಯಕ ದೃಶ್ಯ ಕಾವ್ಯ’ ನಾಟಕ ಪ್ರದರ್ಶನ,ಕಾಯಕ ಪ್ರತಿಷ್ಠಾನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾಯಕ ಪ್ರತಿಷ್ಠಾನ ಸಂಸ್ಥೆ ಹಮ್ಮಿಕೊಂಡಿರುವಈ ಕಾರ್ಯಕ್ರಮದಲ್ಲಿ ಹೊನ್ನಾಳಿ ಹಿರೇಕಲ್ಮಠ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾಶರಣರು, ಬಸವ ಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿಉಪಸ್ಥಿತರಿರುವರುಎಂದು ಸಂಸ್ಥೆಯ ನೂತನ ಅಧ್ಯಕ್ಷ ಕೆ.ಎನ್. ಹನುಮಂತಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ, ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭಾಗವಹಿಸುವರು ಎಂದು ವಿವರ ನೀಡಿದರು.

ಸಾಹಿತಿ ಕುಂ.ವೀರಭದ್ರಪ್ಪ ಕಾಯಕ ಮಹತ್ವದ ಬಗ್ಗೆ ಉಪನ್ಯಾಸ ನೀಡುವರು. ನಟ ದೊಡ್ಡಣ್ಣ ಕಾಯಕ ನಾಟಕ ಪ್ರದರ್ಶನ ಉದ್ಘಾಟಿಸುವರು. ಸಾಹಿತಿ ಶ್ರೀಕಂಠ ಕೂಡಿಗೆ, ಚನ್ನೇಶ್ ಹೊನ್ನಾಳಿ, ಡಿ.ಬಿ.ಶಂಕರಪ್ಪ, ಕೃಷ್ಣ ತಿಪ್ಪೂರ್, ಶ್ರೀನಿವಾಸ್, ಶಿವಕುಮಾರ್ ಚೌಡಶೆಟ್ಟಿ, ಲಿಂಗರಾಜು, ಮುನಿಯಪ್ಪ ಉಪಸ್ಥಿತರಿರುವರು ಎಂದರು.

ADVERTISEMENT

ಕಾಯಕ ಶರಣರ ಸ್ಮರಣೋತ್ಸವ ಮತ್ತು ಕರಿಸಿದ್ದಪ್ಪ ಕುಂಬಾರ್ ಅವರು ರಚಿಸಿದ ನಾಟಕ ‘ಕಾಯಕ’ ಪ್ರದರ್ಶನವಾಗಲಿದೆ. ಬಿ.ಆರ್.ರೇಣುಕಪ್ಪ ನಿರ್ದೇಶಿಸಿದ್ದಾರೆ. ಆರೋಹಣದ ತಂಡ ನಾಟಕ ಪ್ರದರ್ಶಿಸಲಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕತ್ತಿಗೆ ಗಂಗಾಧರಪ್ಪ, ಎಸ್.ಕರಿಸಿದ್ದಪ್ಪ, ಕೆ.ಎಂ.ರುದ್ರಪ್ಪ, ಮೂಗ ಬಸಪ್ಪ, ಎಸ್.ನಾಗರಾಜ್, ಮಲ್ಲಿಕಾರ್ಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.