ADVERTISEMENT

ನಾಳೆ ಅಕ್ಕಿ ಗಿರಣಿದಾರರ ಸಮಾವೇಶ ಆರಂಭ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 12:32 IST
Last Updated 4 ಅಕ್ಟೋಬರ್ 2018, 12:32 IST

ಶಿವಮೊಗ್ಗ: ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಲಗನ್ ಕಲ್ಯಾಣ ಮಂದಿರದಲ್ಲಿ ಅ. 6 ಮತ್ತು 7ರಂದು ರಾಜ್ಯಮಟ್ಟದ ಅಕ್ಕಿ ಗಿರಣಿದಾರರ ಸಮಾವೇಶ ‘ಸಿಹಿಮೊಗೆ‘ ಹಾಗೂ ರಾಜ್ಯ ಸಂಘದ 27ನೇ ವಾರ್ಷಿಕ ಮಹಾಸಭೆ ಹಮ್ಮಿಕೊಂಡಿದೆ.

ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಸದಸ್ಯರ 27ನೇ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿದೆ. ಭತ್ತ ಮತ್ತು ಅಕ್ಕಿಯ ಸಂಸ್ಕರಣೆ, ತಾಂತ್ರಿಕ ವಸ್ತು ಪ್ರದರ್ಶನ, ವಿಚಾರಗೋಷ್ಠಿ ಮತ್ತು ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಶೈಲೇಂದ್ರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮ್ಮೇಳನದ ಯಶಸ್ವಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನಕ್ಕೆ ರಾಜ್ಯ ಸಂಘದ ಆಡಳಿತ ಮಂಡಳಿ ಹಾಗೂ 1 ಸಾವಿರ ಸದಸ್ಯರು ಭಾಗಹಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಆಯೋಜಿಸಿರುವ ‘ರೈಸ್‌ಟೆಕ್ ಎಕ್ಸ್‌ಫೋ–2018'ರಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಯಂತ್ರೋಪಕರಣಗಳ ತಯಾರಕರು, ವಿತರಕರು ಭಾಗವಹಿಸಿ ತಮ್ಮ ತಮ್ಮ ಹೊಸ ಅವಿಷ್ಕಾರ ಪ್ರದರ್ಶಿಸಲಿಸ್ದಾರೆ ಎಂದರು.

ADVERTISEMENT

6ರಂದು ಬೆಳಿಗ್ಗೆ 8.30ಕ್ಕೆ ರಾಜ್ಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಸಮ್ಮೇಳನ ಉದ್ಘಾಟಿಸುವರು. ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಎಲ್ಲ ಶಾಸಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

7ರ ಬೆಳಿಗ್ಗೆ 10.30ಕ್ಕೆ ರಾಜ್ಯ ಸಂಘದ ಗೌರವಾಧ್ಯಕ್ಷ ಎಸ್.ಎಸ್. ಬಕ್ಕೇಶ್, ಅಧ್ಯಕ್ಷ ಡಿ.ಜಿ. ಶಾಂತನಗೌಡ, ಕಾರ್ಯಾಧ್ಯಕ್ಷ ಎನ್.ಆರ್. ವಿಶ್ವಾರಾಧ್ಯ, ಕಾರ್ಯದರ್ಶಿ ಎನ್. ಶ್ರೀನಿವಾಸ ರಾವ್ ನೇತೃತ್ವದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದರು.
ಈ ಸಭೆಯಲ್ಲಿ ಅಕ್ಕಿ ಗಿರಣಿಗಳು ಅನುಭವಿಸುತ್ತಿರುವ ಸಂಕಷ್ಟ ಮತ್ತು ಪರಿಹಾರಗಳನ್ನು ಕುರಿತಂತೆ ಸಮಗ್ರ ಚರ್ಚೆ ನಡೆಯುವುದು. ಸಂಘ ಬಲಗೊಳಿಸುವಲ್ಲಿ ನೋಂದಣಿಯಾಗದೇ ಹೊರಗುಳಿದಿರುವ ಅಕ್ಕಿ ಗಿರಣಿದಾರರ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು. ಸಂಘ ಮತ್ತಷ್ಟು ಬಲಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಚ್.ಎಸ್. ರುದ್ರಸ್ವಾಮಿ, ಎಚ್. ನಾಗೇಶ್, ಸುರೇಂದ್ರ, ಶಿವಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.