ADVERTISEMENT

ವಿದೇಶಿ ಕಂಪನಿಗಳಿಗೆ ಕೃಷಿಭೂಮಿ ಗುತ್ತಿಗೆ: ರೈತ ಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 15:30 IST
Last Updated 27 ಜನವರಿ 2020, 15:30 IST
ಕೆ.ಟಿ.ಗಂಗಾಧರ್‌
ಕೆ.ಟಿ.ಗಂಗಾಧರ್‌   

ಶಿವಮೊಗ್ಗ: ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ಗುತ್ತಿಗೆ ನೀಡುವ ರಾಜ್ಯ ಸರ್ಕಾರದನಿರ್ಧಾರವನ್ನುರಾಜ್ಯ ರೈತ ಸಂಘಖಂಡಿಸಿದೆ.

ದಾವೋಸ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿವೆ. ಇದರಿಂದರಾಜ್ಯ ವೃದ್ಧಿ ಮತ್ತು ಅಭಿವೃದ್ಧಿ ಶಕ್ತಿ ಕೇಂದ್ರವಾಗಿ ಕೃಷಿ ಉತ್ಪನ್ನಗಳು ಹೆಚ್ಚಾಗಲಿದೆ ಎಂಬ ಮುಖ್ಯಮಂತ್ರಿ ಹೇಳಿಕೆನೀಡಿದ್ದಾರೆ.

ನೀತಿ ಆಯೋಗದ ಸಲಹೆಯಂತೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವುದಕ್ಕಾಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲುಸಿದ್ಧತೆ ನಡೆದಿದೆ. ಕೃಷಿಯ ಉತ್ಪಾದಕತೆ ಹೆಚ್ಚಿ ಬಂಡವಾಳ ಬರುತ್ತದೆ ಎಂಬ ಕಂದಾಯ ಸಚಿವ ಆರ್. ಅಶೋಕ್ ಅವರ ಹೇಳಿಕೆಯೂ ಮೂರ್ಖತನದ ಪರಮಾವಧಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಕಾಯ್ದೆಗೆ ತಿದ್ದುಪಡಿ ತಂದರೆ ರೈತರ ಭೂಮಿ ಗುತ್ತಿಗೆ ಪಡೆದು ಅದೇ ಭೂಮಿ ಅಡವಿಟ್ಟು ಕೃಷಿ ಸಾಲ ಪಡೆಯಲು ಕಂಪನಿಗಳಿಗೆ ಅವಕಾಶವಾಗುತ್ತದೆ. ದೊಡ್ಡ ದೊಡ್ಡ ಭೂಮಾಲೀಕರನ್ನು ಸೃಷ್ಟಿಮಾಡಲು ಬಹುರಾಷ್ಟ್ರೀಯ ಕಂಪನಿಗೆ ಅವಕಾಶನೀಡಿದಂತೆ ಆಗುತ್ತದೆ. ಒಡಂಬಡಿಕೆ ಸಮಸ್ಯೆಗಳಾದರೆ ಬಗೆಹರಿಸುವ ಜವಾಬ್ದಾರಿ ತಹಶೀಲ್ದಾರ್‌ಗಳಿಗೆ ಇರುತ್ತದೆ. ಇದರಿಂದ ವ್ಯಾಜ್ಯಗಳು ಹಲವಾರು ವರ್ಷ ತಗಾದೆಗೆ ಒಳಗಾಗಿ ಭೂಮಿ ಪಾಳುಬೀಳುತ್ತದೆ. ಉತ್ಪಾದನೆ ಕುಂಠಿತವಾಗಿ ಆಹಾರ ಉತ್ಪಾದನೆಯ ಕುಸಿಯುತ್ತದೆ.ರೈತರು ನ್ಯಾಯಾಲಯ ಖರ್ಚು ಭರಿಸಲಾಗದೆ ಸಾಮಾಜಿಕ ಅಸಮತೋಲನ ಸೃಷ್ಟಿಯಾಗುತ್ತದೆ. ಗ್ರಾಮೀಣ ಬದುಕು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಕಟ್ಟಲಾಗದೆ ಭೂಮಿ ಹರಾಜು ಹಾಕಲಾಗುತ್ತಿದೆ. ಇದೇ ನಷ್ಟ ಬಹುರಾಷ್ಟ್ರೀಯ ಕಂಪನಿಗಳು ಅನುಭವಿಸಿದರೆಪರಿಹಾರ ಏನು? ಕಂಪನಿಗಳು ಮತ್ತು ಅದರ ಮಾಲೀಕರು ರಾತ್ರೋರಾತ್ರಿ ಓಡಿ ಹೋದರೆ ಭೂಮಿ ಮಾಲೀಕತ್ವ ವಾಪಾಸ್‌ ಪಡೆಯುವುದು ಹೇಗೆ? ಭಾರತ ಮತ್ತು ರಾಜ್ಯದಲ್ಲಿ ಅತಿಹೆಚ್ಚು ಉದ್ಯೋಗ ಮತ್ತು ಆಹಾರ ಭದ್ರತೆ ಒದಗಿಸುತ್ತಿರುವ ಭೂಮಿಯನ್ನು ವಿದೇಶಿ ಕಂಪನಿಗಳಿಗೆ ಕಾನೂನಾತ್ಮಕವಾಗಿ ಹಕ್ಕುನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಗುತ್ತಿಗೆ ಪದ್ಧತಿ ನಿಷೇಧ ಮಾಡಲಾಗಿದೆ. ಆದರೂ, ಅನಧೀಕೃತವಾಗಿ ನಡೆಯುತ್ತಿರುವ ಗುತ್ತಿಗೆ ಪದ್ಧತಿ ಸಕ್ರಮ ಮಾಡಲು ಸರ್ಕಾರ ಮುಂದಾಗಿದೆ. ಗುತ್ತಿಗೆದಾರ ಫಸಲು ಆಧಾರದಲ್ಲಿ ಸಾಲ ಸಹ ಪಡೆಯಬಹುದು. ಪ್ರಕೃತಿ ವಿಕೋಪಕ್ಕೆ ಒಳಗಾದಾಗ ಪರಿಹಾರ, ವಿಮೆ ಮಾಲೀಕರ ಜೊತೆಗೆ ಗುತ್ತಿಗೆದಾರರಿಗೂ ಲಭ್ಯವಾಗುತ್ತದೆ.ಇಂತಹ ದೇಶದ್ರೋಹಿ ಕಾನೂನುಗಳನ್ನು ತರಬಾರದು. ಸಮೂಹ ಬೇಸಾಯ ಪದ್ಧತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಕೆ.ಸಿ.ಗಂಗಾಧರ, ಡಿ.ವಿ.ವೀರೇಶ, ಹಿರಿಯಣ್ಣಯ್ಯಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.