ADVERTISEMENT

ಸಹ್ಯಾದ್ರಿ ವಾಣಿಜ್ಯ ಕಾಲೇಜು: 25ಕ್ಕೆ ಬಹುಶಿಸ್ತೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 13:55 IST
Last Updated 22 ಮಾರ್ಚ್ 2019, 13:55 IST

ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಮಾರ್ಚ್‌ 25ರಂದು ಬಹುತ್ವ ಸಂಕಥನ: ಭಾಷೆ-, ಸಾಹಿತ್ಯ,- ಸಂಸ್ಕೃತಿ ನಿರ್ವಚನ ಕುರಿತು ರಾಷ್ಟ್ರಮಟ್ಟದ ಬಹುಶಿಸ್ತೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕದ ಬಹುತ್ವದ ಆಶಯಗಳನ್ನು ಬೆಂಬಲಿಸುವುದು ಮತ್ತು ವಿಸ್ತರಿಸುವುದು. ನಾಡು-, ನುಡಿ-, ಸಾಹಿತ್ಯ-, ಸಂಸ್ಕೃತಿ ಪ್ರಜ್ಞೆ ಎತ್ತಿ ಹಿಡಿಯುವುದು. ಕನ್ನಡ ಸಾಹಿತ್ಯ ಪ್ರತಿಪಾದಿಸಿದ ಬಹುಜನರ ಸಂಸ್ಕೃತಿ,- ಮಹಿಳೆ, ಅಲಕ್ಷಿತ ಸಮುದಾಯಗಳು, ರೈತರು ಹಾಗೂ ಎಲ್ಲಾ ವರ್ಗದ ಸಂವೇದನೆ ಸಂಕಲಿಸುವುದು ಈ ವಿಚಾರ ಸಂಕಿರಣದ ಆಶಯ ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶುಭಾ ಮರವಂತೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 10ಕ್ಕೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಜೋಗನ್ ಶಂಕರ್ ವಿಚಾರ ಸಂಕಿರಣ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಆಶಯ ಮಾತುಗಳಾಡುವರು. ವಿಶ್ವವಿದ್ಯಾಲಯದ ಕನ್ನಡ ಭಾರತಿ ನಿರ್ದೇಶಕ ಡಾ.ಕೇಶವ ಶರ್ಮಾ ಬಹುತ್ವ ಸಂಕಥನ ಪುಸ್ತಕ ಬಿಡುಗಡೆ ಮಾಡುವರು. ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಆರ್.ಶಶಿರೇಖಾ, ಡಾ.ಕೆ.ಎಸ್.ಸರಳಾ ಉಪಸ್ಥಿತರಿರುವರು. ಪ್ರಾಂಶುಪಾಲರಾದ ಡಾ.ಎಚ್.ಎಂ.ವಾಗ್ದೇವಿ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.

ADVERTISEMENT

11.45ರಿಂದ ಉಪನ್ಯಾಸ ಗೊಷ್ಠಿಗಳು ನಡೆಯಲಿವೆ. ಡಾ.ಜಿ.ಪ್ರಶಾಂತ ನಾಯಕ್, ಡಾ.ಶಿವಾನಂದ ಕೆಳಗಿನಮನಿ, ಡಾ.ಸಬಿತಾ ಬನ್ನಾಡಿ, ಡಾ.ಎಂ.ರಂಗಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2ರಿಂದ ಡಾ.ಜಯಲಲಿತ ಸಮಾನಾಂತರ ಗೋಷ್ಠಿಗಳಿಗೆ ಚಾಲನೆ ನೀಡುವರು. ಅಹ್ವಾನಿತರಿಂದ ಪ್ರಬಂಧಗಳ ಮಂಡನೆಯಾಗಲಿದೆ ಎಂದರು.

ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಸ.ಉಷಾ ಮಾತನಾಡುವರು. ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಚ್.ಎಸ್.ಭೋಜ್ಯಾನಾಯ್ಕ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಡಾ.ಎಚ್.ಎಂ.ವಾಗ್ದೇವಿ, ಪ್ರಾಧ್ಯಾಪಕರಾದ ಕುಮಾರ ಸ್ವಾಮಿ, ಎಚ್.ದೊಡ್ಡ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.