ಶಿವಮೊಗ್ಗ: ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್‌ನ ಸಂಸ್ಥಾಪನ ದಶಮಾನೋತ್ಸವ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣವು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೆಸ್ ಸಭಾಂಗಣದಲ್ಲಿ ಏ.26 ಮತ್ತು 27ರಂದು ನಡೆಯಲಿದೆ ಎಂದು ಫೇಡರೇಷನ್‌ನ ಶಿವಮೊಗ್ಗ ಪ್ರಾಂತ್ಯದ ಪ್ರಮುಖ ಎಸ್.ದತ್ತಾತ್ರಿ ಹೇಳಿದರು.
ಕಾರ್ಯಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ದಂಪತಿ ಉದ್ಘಾಟಿಸುವರು. ಅರಳುಮಲ್ಲಿಗೆ ಪಾರ್ಥಸಾರಥಿ ನೇತೃತ್ವ ವಹಿಸಲಿದ್ದಾರೆ. ಅಂದು ಸಂಜೆ 5.30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಚಕ್ರಾಬ್ಜ ಮಂಡಲಪೂಜೆ ನಡೆಯಲಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.27ರಂದು ಶಾಲಾ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ, ಹೋಮ, ವೈದ್ಯಕೀಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಅಖಿಲ ಭಾರತ ವಿಷ್ಣು ಸಹಸ್ರನಾಮ ಸಮ್ಮೇಳನ ಆರಂಭವಾಗಲಿದೆ. ನಂತರ ವಿಷ್ಣು ಸಹಸ್ರನಾಮ ದೀಕ್ಷಾ ಮಹೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಶಿವಮೊಗ್ಗದಿಂದ ತೆರಳುವ 100 ಜನರಿಗೆ ಉಚಿತ ಬಸ್, ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಮೊದಲು ಹೆಸರು ನೋಂದಾಯಿಸದವರಿಗೆ ಆದ್ಯತೆ. ಆಸಕ್ತರು ಮೊ.9964072793 ಸಂಪರ್ಕಿಸಬೇಕು ಎಂದು ತಿಳಿಸಿದರು.
ಶ್ರೀರಂಜಿನಿ ದತ್ತಾತ್ರಿ, ರಾಮಾಚಾರ್ ಜೋಯಿಸ್, ಶಶಿಕಾಂತ್ ನಾಡಿಗ್, ಎನ್.ಶ್ರೀಧರ್, ಕುಮಾರಶಾಸ್ತ್ರಿ, ಶಬರೀಶ್ ಕಣ್ಣನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.