ADVERTISEMENT

ಆನವಟ್ಟಿ: ಭಾರಿ ಮಳೆ, ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 6:54 IST
Last Updated 10 ಅಕ್ಟೋಬರ್ 2021, 6:54 IST
ಆನವಟ್ಟಿ ಪಟ್ಟಣದಲ್ಲಿ ಶನಿವಾರ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತಿತ್ತು.
ಆನವಟ್ಟಿ ಪಟ್ಟಣದಲ್ಲಿ ಶನಿವಾರ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತಿತ್ತು.   

ಆನವಟ್ಟಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಕೆನರಾ ಬ್ಯಾಂಕ್‌ ಕ್ರಾಸ್‌ನಿಂದ ಪೊಲೀಸ್ ಠಾಣೆವರೆಗೂ ನೀರು ರಸ್ತೆಯಲ್ಲಿ ಹರಿಯಿತು.

ಇದರಿಂದ ಠಾಣೆ ಎದುರಿನ ಕ್ವಾರ್ಟರ್ಸ್‌ಗಳಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿತು.

ಸೊರಬ ರಸ್ತೆಯ ಮೊದಲನೇ ಕೆನರಾ ಬ್ಯಾಂಕ್ ಪಕ್ಕದ ತಿರುವಿನಲ್ಲಿ ಪೈಪ್‌ಲೈನ್‌ ಕಾಮಗಾರಿ ಅಪೂರ್ಣಗೊಂಡಿದ್ದು, ರಸ್ತೆಯಲ್ಲಿ ಗುಂಡಿ ಬಿದ್ದಿದೆ.

ADVERTISEMENT

ಮಳೆ ಬಂದಾಗ ಗುಂಡಿಯಲ್ಲಿ ನೀರು ತುಂಬುವ ಕಾರಣ ರಸ್ತೆ ಕಾಣದೇ ‌ಅಪಘಾತಗಳು ಸಂಭವಿಸುತ್ತಿವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಬೇಕು ಎಂದುಮಂಡಕ್ಕಿ ಹೋಟೆಲ್ ಮಾಲೀಕ ಲಿಂಗರಾಜ್ ಗೌಳಿ
ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.