ADVERTISEMENT

ಸೊರಬದಲ್ಲಿ ಮುಂದುವರೆದ ಮಳೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:18 IST
Last Updated 18 ಅಕ್ಟೋಬರ್ 2019, 13:18 IST
ಸೊರಬದಲ್ಲಿ ಶುಕ್ರವಾರ ಸುರಿದ ಮಳೆ ನಡುವೆಯೇ ವಾಹನಗಳು ಚಲಿಸುತ್ತಿರುವುದು
ಸೊರಬದಲ್ಲಿ ಶುಕ್ರವಾರ ಸುರಿದ ಮಳೆ ನಡುವೆಯೇ ವಾಹನಗಳು ಚಲಿಸುತ್ತಿರುವುದು   

ಸೊರಬ: ತಾಲ್ಲೂಕಿನಾದ್ಯಂತ ಶುಕ್ರವಾರ ಎಡಬಿಡದೆ ಮಳೆ ಸುರಿಯಿತು.

ಹೊಲ, ಗದ್ದೆಗಳಿಗೆ ಕೆಲಸದ ನಿಮಿತ್ತ ತೆರಳಿದ ರೈತರು ಮಧ್ಯಾಹ್ನವೇ ಜಾನುವಾರುಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.

ಕೆಲವು ದಿನಗಳಿಂದ ಸೂರ್ಯನ ಬೆಳಕೆ ಭೂಮಿಗೆ ಬಿದ್ದಿಲ್ಲ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವೇ ಇರುತ್ತದೆ. ಮಧ್ಯಾಹ್ನದಿಂದ ಜಿಟಿಜಿಟಿ ಮಳೆ ಆರಂಭಗೊಂಡರೆ 3ಗಂಟೆಯ ನಂತರ ರಭಸವಾಗಿ ಸುರಿಯುತ್ತದೆ. ವಾಹನ ಸವರಾರರು ಹೆಡ್ ಲೈಟ್ ಹಾಕಿ ವಾಹನ ಚಲಾಯಿಸುವ ದೃಶ್ಯಗಳು ಸಮಾನ್ಯವಾಗಿವೆ.

ADVERTISEMENT

ಈ ಬಾರಿ ಜೂನ್‌ನಿಂದ ಪ್ರಾರಂಭವಾಗಿರುವ ಮಳೆ ಇದುವರೆಗೂ ಬಿಟ್ಟಿಲ್ಲ. ಇದರಿಂದ ಕಟಾವಿಗೆ ಬಂದಿರುವ ಜೋಳದ ಬೆಳೆಗೆ ತೊಂದರೆಯಾದರೆ, ಭತ್ತದ ತೆನೆಯಲ್ಲಿನ ಹೂವು ಉದುರುತ್ತವೆ. ರಭಸವಾಗಿ ಮಳೆ ಸುರಿಯುತ್ತಿರುವುದರಿಂದ ಕಾಳು ಗಟ್ಟಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಸಮೃದ್ಧ ಬೆಳೆ ಬರುವುದು ಕಷ್ಟ ಎಂಬುದು ರೈತರು ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.