ADVERTISEMENT

ಕಾರ್ಗಲ್: ಕಡವೆ ಬೇಟೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:27 IST
Last Updated 24 ಸೆಪ್ಟೆಂಬರ್ 2020, 3:27 IST
ಬೇಟೆಗಾರರನ್ನು ಬಂಧಿಸಿರುವ ಕಾರ್ಗಲ್‌ ವನ್ಯ ಜೀವಿ ಅಭಯಾರಣ್ಯದ ಅಧಿಕಾರಿಗಳ ತಂಡ
ಬೇಟೆಗಾರರನ್ನು ಬಂಧಿಸಿರುವ ಕಾರ್ಗಲ್‌ ವನ್ಯ ಜೀವಿ ಅಭಯಾರಣ್ಯದ ಅಧಿಕಾರಿಗಳ ತಂಡ   

ಕಾರ್ಗಲ್: ಭಾರಂಗಿ ಹೋಬಳಿಯ ಬ್ರಾಹ್ಮಣ ಇಳಕಳಲೆ ಗ್ರಾಮದ ಹುಕ್ಲು ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದಲ್ಲಿ ಕಡವೆ ಬೇಟೆಯಾಡಿದ ಬೇಟೆಗಾರರನ್ನು ಮಹಿಳಾ ಅರಣ್ಯಾಧಿಕಾರಿ ಪ್ರೀತಿ ರಾಮದಾಸ ನಾಯ್ಕ ಬುಧವಾರ ಬಂಧಿಸಿದ್ದಾರೆ.

ಹುಕ್ಲು ನಿವಾಸಿಗಳಾದ ನಾಗರಾಜ ದ್ಯಾವಪ್ಪ ಮತ್ತು ಕಾರ್ಗಲ್ ಮಳಲಿ ವಾಸಿ ಸಂದೀಪ ಚೌಡಪ್ಪ ಬಂಧಿತರು.

ಆರೋಪಿಗಳಿಂದ ಕಡವೆಯ ಕಾಲು, ಚರ್ಮ, ಮಾಂಸ ಮತ್ತು ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ಪಡೆ ರಚಿಸಲಾಗಿದೆ ಎಂದು ವಲಯಾರಣ್ಯಾಧಿಕಾರಿ ಪ್ರೀತಿ ರಾಮದಾಸ ನಾಯ್ಕ ತಿಳಿಸಿದರು.

ADVERTISEMENT

ದಾಳಿಯಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.