ADVERTISEMENT

ಗಾಂಜಾ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 7:06 IST
Last Updated 15 ಫೆಬ್ರುವರಿ 2021, 7:06 IST

ಶಿವಮೊಗ್ಗ: ಇಲ್ಲಿನ ಶಕ್ತಿಧಾಮ–2 ಲೇಔಟ್‌ ಬಳಿ ಗಾಂಜಾ‌‌ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು‌ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶಿವಮೊಗ್ಗ ಟೌನ್ ನಿವಾಸಿ ಸಚಿನ್, ಕೋಟೆಗಂಗೂರು ನಿವಾಸಿ ಸತೀಶ್ ಬಂಧಿತ ಆರೋಪಿಗಳು. ಬಂಧಿತರಿಂದ 420 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್‌ಪಿಉಮೇಶ್ ಈಶ್ವರ್ ನಾಯಕ್, ಸಿಪಿಐ ಸಂಜೀವ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ್, ಸಿಬ್ಬಂದಿ ಎಚ್.ಸಿ. ಯಶವಂತಕುಮಾರ್‌‌‌‌‌, ಮಂಜುನಾಥ್‌, ಧನ್ಯಾನಾಯ್ಕ, ಕಲ್ಮೇಶ ತಂಡ ದಾಳಿ ನಡೆಸಿತ್ತು.

ADVERTISEMENT

ಮಾಹಿತಿ ನೀಡಿ:ಗಾಂಜಾ ಹಾಗೂಇತರೆ ಮಾದಕ ವಸ್ತುಗಳ ಮಾರಾಟದಬಗ್ಗೆ ಸಾರ್ವಜನಿಕರು ಜಿಲ್ಲಾ ಪೊಲೀಸ್ ಕಚೇರಿ (9480803301)ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.