ADVERTISEMENT

ಸೂರಗೊಂಡನಕೊಪ್ಪ: 0ಸಂತ ಸೇವಾಲಾಲ್‌ ಜಯಂತಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 11:15 IST
Last Updated 11 ಫೆಬ್ರುವರಿ 2020, 11:15 IST

ಶಿವಮೊಗ್ಗ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕುಸೂರಗೊಂಡನಕೊಪ್ಪದಲ್ಲಿ ಫೆ.13, 14 ಮತ್ತು 15ರವರೆಗೆ ಸಂತ ಸೇವಾಲಾಲ್‌ ಅವರ 281ನೇ ಜಯಂತಿ ಹಮ್ಮಿಕೊಳ್ಳಲಾಗಿದೆ.

ಫೆ.13ರ ಬೆಳಿಗ್ಗೆ 8ಕ್ಕೆಲಮಾಣಿ ಸಮಿತಿಯ ಅಧ್ಯಕ್ಷ ಎಂ.ರುದ್ರಪ್ಪ ಧ್ವಜಾರೋಹಣ, ಮಾತಾ ಮರಿಯಮ್ಮ ದೇವಿಯಮ್ಮ ಕಾಟಿ ಆರೋಹಣವನ್ನು ಪಿ.ರಾಜೀವ್ ಹಾಗೂ ಧಾರ್ಮಿಕವಿಧಿ-ವಿಧಾನಗಳ ಆರಂಭೋತ್ಸವವನ್ನು ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನಿರ್ದೇಶಕಶಿವಶಂಕರ ನಾಯ್ಕ ನೆರವೇರಿಸುವರು.ಮಧ್ಯಾಹ್ನ 12ಕ್ಕೆವಾಲಿಬಾಲ್ ಕ್ರೀಡೆಗಳು ನಡೆಯಲಿವೆ ಎಂದುಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿಮಾಹಿತಿ ನೀಡಿದರು.

ಫೆ.14ರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಯಂತ್ಯುತ್ಸವ ಉದ್ಘಾಟಿಸುವರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ್ ಎಸ್.ಸವದಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಪ್ರಭು ಬಿ.ಚವ್ಹಾಣ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಜಿ.ಎಂ.ಸಿದ್ದೇಶ್ವರ್, ಶ್ಯಾಮನೂರು ಶಿವಶಂಕರಪ್ಪ ಉಪಸ್ಥಿತರಿರುವರು.ಶಾಸಕ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರುವಿವರ ನೀಡಿದರು.

ADVERTISEMENT

ಅಂದು ಸಂಜೆ 6.30ಕ್ಕೆ ಸಮಾಜದ ಮುಖಂಡರು, ಸಾಧು ಸಂತರು ಮತ್ತು ಜನಪ್ರತಿನಿಧಿಗಳ ಚಿಂತನಾಸಭೆ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.15ರ ಬೆಳಿಗ್ಗೆ 9ಕ್ಕೆ‘ಮಹಾಭೋಗ್’ ಮಹಾಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮುಹೋತ್ಸವ ಸಂಪನ್ನಗೊಳ್ಳಲಿದೆ ಎಂದರು.

ಈ ಸಾಂಸ್ಕೃತಿಕ ಜಾತ್ರಾ ಮುಹೋತ್ಸವದಲ್ಲಿ ಬಂಜಾರರ ಕಲೆ ಮತ್ತು ಧಾರ್ಮಿಕಪರಂಪರೆ 10 ವೇದಿಕೆಗಳಲ್ಲಿ ಅನಾವರಣವಾಗಲಿದೆ. ದೇಶದ ನಾನಾ ಭಾಗಗಳಿಂದ ಬರುವ ಭಕ್ತರು,ಮಾಲಾಧಾರಿಗಳು, ಕಲಾತಂಡಗಳು, ರಂಗುರಂಗಿನ ಉಡುಗೆತೊಟ್ಟುಕಂಗೊಳಿಸುವರು. ಈ ಮಹಾ ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ‘ಲದೇಣಿ ಬಂಜಾರ’ ತಂಡ ಕರವಸೂಲಿ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದಿತ್ತು.18ನೇ ಶತಮಾನದಲ್ಲಿಯೇ ಕರ ನಿರಾಕರಣೆ ಚಳವಳಿಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂತ ಸೇವಾಲಾಲರು ಒಬ್ಬ ಮಹಾನ್ ಯೋಗಿ, ಮಹಾಜ್ಞಾನಿ. ಅಲೆಮಾರಿ ಬಂಜಾರ ಸಮುದಾಯಕ್ಕೆ ಶಾಶ್ವತ ಬದುಕು ಕಟ್ಟಿಕೊಟ್ಟ ಸಮಾಜ ಸುಧಾರಕ. ಇಂತಹ ಮಹಾಮಹಿಮ ತತ್ವಜ್ಞಾನಿಯ 280ನೇ ಜಯಂತಿಯನ್ನುಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ನಾಯ್ಕ, ತ್ಯಾವರೇ ನಾಯ್ಕ, ಕುಮಾರ್ ನಾಯ್ಕ, ನಾನ್ಯಾನಾಯ್ಕ, ನಾಗೇಶ್ ನಾಯ್ಕ, ಶಶಿಕುಮಾರ್, ಮಾರುತಿ, ಮನೋಹರ್, ಗಿರೀಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.