ತೀರ್ಥಹಳ್ಳಿ: 25ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಶರಾವತಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಒಟ್ಟು ₹229.85 ಕೋಟಿ ವ್ಯವಹಾರ ನಡೆಸಿ ₹2.60 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ವಿ.ಅಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ, ಮದುವೆ, ವಿದ್ಯಾಭ್ಯಾಸ, ಆರೋಗ್ಯ, ಸಣ್ಣ ವ್ಯವಹಾರ, ವ್ಯಾಪಾರ ಮಾಡುವವರಿಗೆ ಕನಿಷ್ಟ ದಾಖಲೆಯೊಂದಿಗೆ ನಂಬಿಕೆ ಆಧಾರದ ಮೇಲೆ ಸಾಲ ನೀಡಲಾಗುತ್ತಿದೆ. ಶಿಫಾರಸು ಇಲ್ಲದೆ ವ್ಯವಹಾರದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರಿಂದ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿದೆ. ಸಂಸ್ಥೆಯ ಆರ್ಥಿಕ ಭದ್ರತೆ ದೃಷ್ಟಿಯಿಂದ ₹131 ಕೋಟಿ ಸ್ಥಿರಾಸ್ಥಿ ಹೊಂದಿದೆ ಎಂದು ತಿಳಿಸಿದ್ದಾರೆ.
ಸಾಲದ ಮೇಲಿನ ಬಡ್ಡಿ ₹8.57 ಕೋಟಿ, ಕಟ್ಟಡ ಬಾಡಿಗೆ ₹29 ಲಕ್ಷ, ಇ-ಸ್ಟಾಂಪ್ ₹1 ಲಕ್ಷ, ವಿನಿಯೋಗದ ಮೇಲಿನ ಬಡ್ಡಿ ₹13.6 ಲಕ್ಷ, ಇತರೆ ₹9 ಲಕ್ಷ ಲಾಭ ಗಳಿಸಿದೆ. ಒಟ್ಟು ಲಾಭಾಂಶದಲ್ಲಿ ಶೇಕಡಾ 10 ರಷ್ಟು ಡಿವಿಡೆಂಟ್ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.