ADVERTISEMENT

ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ: ರಘುರಾಮ್‌ಗೆ ಗೆಲುವು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:06 IST
Last Updated 13 ಏಪ್ರಿಲ್ 2025, 16:06 IST
ಶಿವಮೊಗ್ಗದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಯಗಳಿಸಿದ ರಘುರಾಮ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು
ಶಿವಮೊಗ್ಗದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಯಗಳಿಸಿದ ರಘುರಾಮ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು   

ಶಿವಮೊಗ್ಗ: ಇಲ್ಲಿನ ವಾಸವಿ ಶಾಲಾ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ರಘುರಾಮ್ ಅವರು 852 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಾಗರದ ಎಲ್.ಟಿ.ತಿಮ್ಮಪ್ಪ ಅವರು 721 ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3,462 ಮತಗಳ ಪೈಕಿ 1,617 ಮತಗಳು ಚಲಾವಣೆಗೊಂಡಿವೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಘುನಾಥ್ ಅವರಿಗೆ ಶಿವಮೊಗ್ಗ ಜಿಲ್ಲೆಯಿಂದ 780 ಮತ ಹಾಗೂ ಭಾನುಪ್ರಕಾಶ್ ಶರ್ಮಾ ಅವರಿಗೆ 794 ಮತಗಳು ಚಲಾವಣೆಗೊಂಡಿವೆ. 

ADVERTISEMENT

ಶಿವಮೊಗ್ಗದಲ್ಲಿ ಆರು ಬೂತ್‌ಗಳನ್ನು ತೆರೆಯಲಾಗಿತ್ತು. ವಾಸವಿ ಶಾಲೆಯಲ್ಲೇ ಮತ ಎಣಿಕೆ ಮಾಡಲಾಯಿತು. ಸಂಜೆ 5.30ರ ವೇಳೆಗೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶವನ್ನು ಪ್ರಕಟಿಸಲಾಯಿತು. 

ಬ್ರಾಹ್ಮಣ ಮಹಾ ಸಭಾದ ಜಿಲ್ಲಾ ಘಟಕ ಹಾಲಿ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಮಾಜಿ ಶಾಸಕ ಕೆ.ಬಿ.ಪ್ರನ್ನಕುಮಾರ್, ಆರ್.ಎಸ್.ಎಸ್.ಪ್ರಮುಖ ಪಟ್ಟಾಭಿರಾಮ್, ಎಸ್.ದತ್ತಾತ್ರಿ, ಡಾ.ಎಸ್.ಶ್ರೀಧರ್, ಎನ್.ಇ.ಎಸ್.ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಡಾ.ಪಿ.ನಾರಾಯಣ, ರುಕ್ಮಿಣಿ ವೇದವ್ಯಾಸ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.