ಶಿವಮೊಗ್ಗ: ಇಲ್ಲಿನ ಕ್ರಿಶ್ ಮ್ಯೂಸಿಕ್ ವತಿಯಿಂದ ಏಪ್ರಿಲ್ 19ರಂದು ಆನ್‌ಲೈನ್ ಸಿಂಗಿಂಗ್ ಸ್ಪರ್ಧೆಯ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ.
ಅಂದು ಸಂಜೆ 6 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವೈದ್ಯ ಡಾ.ಶಶಿಕುಮಾರ್ ಅರಸ್, ನಟಿ ವಿಜಯಲಕ್ಷ್ಮಿ, ನಿವೃತ್ತ ಪ್ರಾಧ್ಯಾಪಕ ಎಚ್.ಕಲ್ಲಣ್ಣ, ಗಾಯಕ ಕೆ.ಯುವರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.