ADVERTISEMENT

ವೈದ್ಯರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಮುಖ್ಯ ಶಿಕ್ಷಕ ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:20 IST
Last Updated 1 ಜುಲೈ 2025, 13:20 IST
ಹೊಳೆಹೊನ್ನೂರಿನ ಮೀಪದ ಯಡೇಹಳ್ಳಿ ಜ್ಞಾನಶ್ರೀ ಪಬ್ಲಿಕ್ ಶಾಲೆಯಲ್ಲಿ ವೈದ್ಯರ ದಿನಾಚಾರಣೆ ಆಚರಿಸಲಾಯಿತು.
ಹೊಳೆಹೊನ್ನೂರಿನ ಮೀಪದ ಯಡೇಹಳ್ಳಿ ಜ್ಞಾನಶ್ರೀ ಪಬ್ಲಿಕ್ ಶಾಲೆಯಲ್ಲಿ ವೈದ್ಯರ ದಿನಾಚಾರಣೆ ಆಚರಿಸಲಾಯಿತು.   

ಹೊಳೆಹೊನ್ನೂರು : ಗ್ರಾಮೀಣ ಪ್ರದೇಶದಲ್ಲಿ ವೈದ್ಯಾಧಿಕಾರಿಗಳ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಮುಖ್ಯ ಶಿಕ್ಷಕ ಮಂಜುನಾಥ್ ತಿಳಿಸಿದರು.

ಅವರು ಸಮೀಪದ ಯಡೇಹಳ್ಳಿಯ ಜ್ಞಾನಶ್ರೀ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ವೈದ್ಯಾಧಿಕಾರಿಗಳ ದಿನಾಚಾರಣೆಯಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಆರೋಗ್ಯ ಕಾಳಜಿ ಮೈ ಗೊಡಿಸಿಕೊಳ್ಳಬೇಕು. ವೃತ್ತಿಪರ ವೈದ್ಯರು ಎದುರಿಸುವ ಭಾವನಾತ್ಮಕ ಮತ್ತು ಮಾನಸಿಕ ಹೋರಾಟಗಳು ಯಾರ ಕಣ್ಣಿಗೂ ಕಾಣುವುದಿಲ್ಲ. ನಮ್ಮ ಆರೈಕೆ ಮಾಡುವ ವೈದ್ಯರು ತಮ್ಮ ಪಾತ್ರಗಳನ್ನು ಮೀರಿ ಸಮಾಜದ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಬಯಸುತ್ತಾರೆ. ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುವಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ನಿರಂತರ ಸಮರ್ಪಣೆ, ಕಠಿಣ ಪರಿಶ್ರಮ ತ್ಯಾಗವನ್ನು ಮುಂದುದರೆಸಿದ್ದಾರೆ. ವೈದ್ಯರು ಜೀವ ನೀಡುವ ಭಗವಂತ, ಹಾಗಾಗಿ ವೈದ್ಯರನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ನಾವುಗಳು ಮನೆಯಲ್ಲಿ ನಿತ್ಯ ಪೂಜೆ ಮಾಡುವಾಗ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸೇನೆಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಿ ಎಂದರು.

ADVERTISEMENT

ಆಡಳಿತಾಧಿಕಾರಿ ಮಂಜುನಾಥ್, ದೇವರಾಜ್, ಯುವರಾಜ್, ಮೃತ್ಯಂಜಯಸ್ವಾಮಿ, ಸುಧಾ, ಶಾಂಭವಿ, ಗೀತಾ, ಬಿಂದು, ಹರೀಶ್, ಕಾವ್ಯ, ಸರಿತಾ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.