ADVERTISEMENT

ಯಡಿಯೂರಪ್ಪ ಜನ್ಮದಿನ: 27ಕ್ಕೆ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 12:49 IST
Last Updated 20 ಫೆಬ್ರುವರಿ 2020, 12:49 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಶಿವಮೊಗ್ಗ: ವೀರಶೈವ ಕಲ್ಯಾಣಮಂದಿರದಲ್ಲಿ ಫೆ.27ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 78ನೇ ವರ್ಷದಜನ್ಮ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಪ್ರೇರಣಾ ಎಜುಕೇಷನಲ್ ಮತ್ತು ಸೋಷಿಯಲ್ ಟ್ರಸ್ಟ್, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಬಳಗದ ಸಹಯೋಗದಲ್ಲಿಈ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೃದಯ, ಸಾಮಾನ್ಯ ಔಷಧ, ಶ್ವಾಸಕೋಶ, ಕೀಳುಮೂಳೆ, ಸ್ತ್ರೀರೋಗ,ರಕ್ತದೊತ್ತಡ,ಮಧುಮೇಹ ಕುರಿತುತಪಾಸಣೆ ನಡೆಸಲಾಗುವುದು. ವೈದ್ಯರ ಸಲಹೆ ಮೇರೆಗೆ ಸಾಮಾನ್ಯ ಔಷಧವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಚಂದ್ರಶೇಖರ್ (93438 96008, 97390 38205) ಅವರನ್ನುಸಂಪರ್ಕಿಸಬಹುದು ಎಂದರು.

ADVERTISEMENT

ಆರೋಗ್ಯ ತಪಾಸಣಾ ಕೇಂದ್ರದಲ್ಲಿ ಆಯುಷ್ಮಾನ್ ಕಾರ್ಡ್ ವಿತರಿಸಲಾಗುವುದು.ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ರಾಜ್ಯ8ನೇಸ್ಥಾನದಲ್ಲಿತ್ತು.74 ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳನ್ನು ಹೊಸದಾಗಿನೋಂದಾಯಿಸಿದ ನಂತರ ಪ್ರಥಮ ಸ್ಥಾನಕ್ಕೇರಿದೆ. ಚಿಕಿತ್ಸಾ ವೆಚ್ಚವನ್ನು₨15 ಲಕ್ಷದವರೆಗೂ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆಎಂದು ಮಾಹಿತಿ ನೀಡಿದರು.

ವಿವಿಧ ಕಾಮಗಾರಿಗಳಿಗೆ ಚಾಲನೆ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರು ಫೆ.27ರಂದು ಶಿಕಾರಿಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು. ಮೂಡಿ, ಮೂಗೂರು ಏತ ನೀರಾವರಿಯೋಜನೆಗಳಿಗೆಆನವಟ್ಟಿಯಲ್ಲಿ, ಪುರದ ಕೆರೆ, ಇತರೆ ಏತ ನೀರಾವರಿ ಯೋಜನೆಗಳಿಗೆ ಕಾಮಗಾರಿಗೆಶಿಕಾರಿಪುರದಲ್ಲಿಭೂಮಿಪೂಜೆ ನೆರವೇರಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ:ಅಂದೇಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿರುವರು ಎಂದರು.

ಜಿಲ್ಲೆಯ ಅಭಿವೃದ್ದಿಗಾಗಿ ಹಲವು ಯೋಜನೆ ರೂಪಿಸಲಾಗಿದೆ. ಶಿಕಾರಿಪುರದಲ್ಲಿ ಆಸ್ಪತ್ರೆ, ಕೆಎಸ್ಆರ್‌ಟಿಸಿ ಡಿಪೊ, ಶಿವಮೊಗ್ಗದಲ್ಲಿ ಕ್ಯಾನ್ಸರ್ ಮತ್ತು ಆಯುರ್ವೇದಿಕ್ಕೇಂದ್ರ, ಉದ್ಯೋಗ ಮೇಳ, ಇಎಸ್ಐ ಆಸ್ಪತ್ರೆದೊರಕಲಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಸುವರ್ಣಾಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ,ಮುಖಂಡರಾದಎಸ್.ದತ್ತಾತ್ರಿ, ಎನ್.ಜೆ.ರಾಜಶೇಖರ್, ಎಸ್.ಜ್ಞಾನೇಶ್ವರ್, ಎಸ್.ಎಸ್.ಜ್ಯೋತಿ ಪ್ರಕಾಶ್, ನಾಗರಾಜ್, ಬಳ್ಳೆಕೆರೆ ಸಂತೋಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.