ADVERTISEMENT

ಅಂಧರ ಬಾಳಿಗೆ ಬೆಳಕಾದ ಶಾರದಾ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:29 IST
Last Updated 8 ಮಾರ್ಚ್ 2021, 5:29 IST
ಎಸ್.ಶಾರದಾ
ಎಸ್.ಶಾರದಾ   

ಭದ್ರಾವತಿ: 22 ವರ್ಷದಿಂದ ಇಲ್ಲಿನ ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಎಸ್. ಶಾರದಾ ಅವರು ಅಂಧರ ಬಾಳಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ.

ಅಂಧತ್ವದ ಬದುಕಿನಲ್ಲಿ ಜೀವನ ನಡೆಸುವುದೇ ಕಷ್ಟಕರ ಎನ್ನುವ ಮನಃಸ್ಥಿತಿಯಲ್ಲಿದ್ದ ಅಂಧ ಮಕ್ಕಳ ಬಾಳಿಗೆ ಹಾಗೂ ಅವರ ಪೋಷಕರಿಗೆ ನೆರವಾಗುವ ರೀತಿಯಲ್ಲಿ ಶಿಕ್ಷಣ, ಹಾಡು, ಸ್ವ ಉದ್ಯೋಗ ತರಬೇತಿ ಕೊಡಿಸುವ ಮೂಲಕ ನೆರವಿಗೆ ನಿಂತಿದ್ದಾರೆ ಶಾರದಾ.

ಈ ಸಂಸ್ಥೆಯ ಆಡಳಿತಾಧಿಕಾರಿ ಆಗುವ ಮುನ್ನ ಬೆಂಗಳೂರಿನ ಎನ್ಎಬಿ ಕೇಂದ್ರದಲ್ಲಿ ತರಬೇತಿ ಪಡೆದ ಇವರು ಶಿವಮೊಗ್ಗದ ಹೆಸರಾಂತ ನೇತ್ರ ವೈದ್ಯರಾದ ಡಾ.ಪ್ರಶಾಂತ್ ಇಸ್ಲೂರ್, ಡಾ.ಅಶೋಕ ಪೈ, ಉದ್ಯಮಿ ಭಾರದ್ವಾಜ್ ಹಾಗೂ ಇನ್ನಿತರರು ಆರಂಭಿಸಿದ ಶಿವಮೊಗ್ಗ ಅಂಧರ ಕೇಂದ್ರದಲ್ಲಿ ಅಂಧರ ಕುರಿತು ಸರ್ವೆ ಕಾರ್ಯ ನಡೆಸಿ ತಮ್ಮ ವೃತ್ತಿ ಆರಂಭಿಸಿದರು.

ADVERTISEMENT

2000ನೇ ಇಸವಿಯಲ್ಲಿ ಆರಂಭವಾದ ಸಿದ್ಧಾರ್ಥ ಅಂಧರ ಕೇಂದ್ರದ ಆಡಳಿತಾಧಿಕಾರಿಯಾಗಿ ಕೆಲಸ ಆರಂಭಿಸಿದ ಶಾರದಾ ಅವರು ಅಂಧ ಮಕ್ಕಳನ್ನು ಹುಡುಕಿ ತಂದು ಕೇಂದ್ರಕ್ಕೆ ಸೇರ್ಪಡೆ ಮಾಡುವ ಜತೆಗೆ ಅವರ ಶಿಕ್ಷಣ, ಸ್ವ ತರಬೇತಿ ಹಾಗೂ ಇನ್ನಿತರೆ ಚಟುವಟಿಕೆಗೆ ಸಿದ್ಧ ಮಾಡುವ ಗುರುತರ ಜವಾಬ್ದಾರಿ ನಿರ್ವಹಿಸಿ ಯಶ ಕಂಡಿದ್ದಾರೆ.

‘ಚಿಕ್ಕ ವಯಸ್ಸಿನಲ್ಲಿ ಜ್ವರ ಹೆಚ್ಚಾಗಿ ನನಗೆ ಕಣ್ಣು ಕಾಣದಾಯಿತು. ತಂದೆ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ವಾರದ ನಂತರ ಕಣ್ಣು ಕಾಣುವಂತಾಯಿತು. ಅಲ್ಲಿಗೆ ಬರುತ್ತಿದ್ದ ಕಣ್ಣಿಲ್ಲದವರ ಚಿತ್ರಣ ಕಂಡು ಮುಂದೆ ಅವರ ಬದುಕಿಗೆ ಆಧಾರವಾಗುವ ಕೆಲಸ ಮಾಡಬೇಕೆಂದು ನಿಶ್ಚಯಿಸಿದ್ದೆ. ಅದಕ್ಕೆ ವರವಾಗುವ ರೀತಿ ಅವಕಾಶ ಸಿಕ್ಕಿತು’ ಎನ್ನುವ ಶಾರದಾ ಅವರ
ಮಾತಿನಲ್ಲಿ ಸೇವಾ ಭಾವದ ತುಡಿತ ಕಾಣುತ್ತದೆ.

ಇಲ್ಲಿವರೆಗೆ ಈ ಕೇಂದ್ರದಿಂದ 200ಕ್ಕೂ ಅಧಿಕ ಮಂದಿ ವಿವಿಧ ರೀತಿಯ ತರಬೇತಿ, ಶಿಕ್ಷಣ ಪಡೆದು ತೆರಳಿದ್ದಾರೆ. ಅವರಲ್ಲಿ 80ಕ್ಕೂ ಅಧಿಕ ಹೆಣ್ಣುಮಕ್ಕಳು ಇದ್ದು. ನಾಲ್ವರು ಸರ್ಕಾರಿ ನೌಕರಿಯಲ್ಲಿದ್ದಾರೆ. ಅನೇಕರು ಚೇರ್ ನಿಟ್ಟಿಂಗ್, ಹಾಡು, ಬ್ಯಾಗ್ ತಯಾರಿಸುವ ಉದ್ಯೋಗ ನಡೆಸಿದ್ದಾರೆ. ಎಂಪಿಎಂ ಹಾಗೂ ವಿಐಎಸ್ಎಲ್ ಕಾರ್ಖಾನೆಯ ಚೇರ್ ನಿಟ್ಟಿಂಗ್ ಕೆಲಸಕ್ಕೆ ಸುಮಾರು 20 ಮಂದಿ ತೆರಳುತ್ತಿದ್ದರು. ಆದರೆ ಈಗ ಎಂಪಿಎಂ ಸ್ಥಗಿತಗೊಂಡ ಕಾರಣ ಅದು ಸಹ ಇಲ್ಲ ಎಂದು ಅವರ ಕುರಿತಾದ ಕಾಳಜಿ ವ್ಯಕ್ತಪಡಿಸುತ್ತಾರೆ.

‘ ಎಂದು ಸ್ಮರಿಸುವ ಶಾರದಾ ಹಲವರ ಬಾಳಿಗೆ ಬೆಳಕು ನೀಡಿದ ಸಂತೃಪ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.