ADVERTISEMENT

ಆಂಬುಲೆನ್ಸ್‌ನಲ್ಲೇ ಯಶಸ್ವಿ ಹೆರಿಗೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 3:30 IST
Last Updated 12 ಅಕ್ಟೋಬರ್ 2021, 3:30 IST
ಆನವಟ್ಟಿ ಸಮೀಪದ ಬೆಟ್ಟದಕೂರ್ಲಿ ಗ್ರಾಮದ ರೇಖಾ ನಾಗರಾಜ ಅವರಿಗೆ ಆಂಬುಲೆನ್ಸ್‌ನಲ್ಲಿ ಹೆರಿಗೆಯಾಯಿತು
ಆನವಟ್ಟಿ ಸಮೀಪದ ಬೆಟ್ಟದಕೂರ್ಲಿ ಗ್ರಾಮದ ರೇಖಾ ನಾಗರಾಜ ಅವರಿಗೆ ಆಂಬುಲೆನ್ಸ್‌ನಲ್ಲಿ ಹೆರಿಗೆಯಾಯಿತು   

ಆನವಟ್ಟಿ: ಸಮೀಪದ ಬೆಟ್ಟದಕೂರ್ಲಿ ಗ್ರಾಮದ ರೇಖಾ ನಾಗರಾಜ ಅವರಿಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಂಬುಲೆನ್ಸ್‌ನಲ್ಲೇ ಹೆರಿಗೆಯಾಗಿದೆ.

ರೇಖಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗಶುಶ್ರೂಷಕ ಮಾಲತೇಶ್ ಅವರು ತಕ್ಷಣ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ, ಆಶಾ ಕಾರ್ಯಕರ್ತೆ ಶಶಿಕಲಾ ಹಾಗೂ ಚಾಲಕ ಪರಮೇಶಪ್ಪ ಅವರ ಸಹಾಯ ಪಡೆದು ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT