ADVERTISEMENT

ದೇವಸ್ಥಾನ ಸಮಿತಿ, ಪಾಲಿಕೆ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 8:04 IST
Last Updated 3 ಡಿಸೆಂಬರ್ 2020, 8:04 IST
ಶಿವಮೊಗ್ಗ ರವೀಂದ್ರ ನಗರ ದೇವಸ್ಥಾನ ಜಾಗ ತೆರವಿಗೆ ಸಮಿತಿ ಸದಸ್ಯರು ಬುಧವಾರ ಪ್ರತಿರೋಧ ವ್ಯಕ್ತಪಡಿಸಿದರು
ಶಿವಮೊಗ್ಗ ರವೀಂದ್ರ ನಗರ ದೇವಸ್ಥಾನ ಜಾಗ ತೆರವಿಗೆ ಸಮಿತಿ ಸದಸ್ಯರು ಬುಧವಾರ ಪ್ರತಿರೋಧ ವ್ಯಕ್ತಪಡಿಸಿದರು   

ಶಿವಮೊಗ್ಗ: ರವೀಂದ್ರನಗರ ದೇವಸ್ಥಾನ ಜಾಗದ ವಿವಾದ ತಾರಕಕ್ಕೇರಿದ್ದು, ದೇವಸ್ಥಾನ ಸಮಿತಿ, ನಗರಪಾಲಿಕೆ ಅಧಿಕಾರಿಗಳ ಮಧ್ಯೆ ಬುಧವಾರ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಜಾಗವಿದೆ. ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಿದರು. ದೇವಸ್ಥಾನ ಸಮಿತಿ ಮುಖಂಡ ಎಸ್.ಪಿ. ಶೇಷಾದ್ರಿ ಮತ್ತಿತರರು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಎಸ್.ಪಿ.ಶೇಷಾದ್ರಿ ಅವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ADVERTISEMENT

ದೇವಸ್ಥಾನ ಸಮಿತಿ ಮುಖಂಡ ಎಸ್.ಕೆ. ಮರಿಯಪ್ಪ, ‘ಪಾಲಿಕೆ ದೌರ್ಜನ್ಯ ನಡೆಸುತ್ತಿದೆ. ಇದು ದೇವಸ್ಥಾನಕ್ಕೆ ಸೇರಿದ ಜಾಗ. ಪಾಲಿಕೆ ಅಧಿಕಾರಿಗಳು ನಗರದಲ್ಲಿರುವ ದೇವಸ್ಥಾನಗಳ ಜಾಗ ಹೀಗೆಯೆ ತೆರವುಗೊಳಿಸುತ್ತಾರಾ’ ಎಂದು ಪ್ರಶ್ನಿಸಿದರು.

‘ದೇವಸ್ಥಾನದ ಆಸ್ತಿ ಪಾಲಿಕೆ ಕಬಳಿಸುತ್ತಿದೆ. ಖಾತೆ ಮಾಡಿ, ಪ್ಲಾನ್‌ ನೀಡಲಾಗಿದೆ. ಎಸ್.ಎಂ. ಕೃಷ್ಣಮುಖ್ಯಮಂತ್ರಿಯಾಗಿದ್ದ ಅವಧಿ
ಯಲ್ಲಿ ಭೂಮಿಪೂಜೆ ನೆರವೇರಿಸಿದ್ದಾರೆ. ‘ಸೂಡಾ’ದಿಂದ ಒಪ್ಪಿಗೆ ಸಿಕ್ಕಿದೆ. ಪ್ರಕರಣ ನ್ಯಾಯಾಲಯದಲ್ಲೂ ಇದೆ. ಹಾಗಾಗಿ, ತೆರವುಗೊಳಿಸಬಾರದು. ಘಟನೆ ಹಿಂದೆ ವಾರ್ಡ್‌ ಸದಸ್ಯರ ಕೈವಾಡವಿದೆ’ ಎಂದು ಆರೋಪಿಸಿದರು.

‘ದೇವಸ್ಥಾನಕ್ಕೆ ಸೇರಿದ ಜಾಗ ಖಾತೆ ಮಾಡಿಕೊಂಡಿರುವ ಕ್ರಮವೇ ತಪ್ಪಿದೆ. ಅವರು ಹೇಗೆ ಮಾಡಿಕೊಂಡರೋ ಗೊತ್ತಿಲ್ಲ. ನ್ಯಾಯಾಲಯದಲ್ಲಿ ನಮಗೆ ಗೆಲುವು ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.