ADVERTISEMENT

ನಿಯಮ ಪಾಲಿಸಿದರೆ ಅಪಘಾತ ಮುಕ್ತ ಸಂಚಾರ: ಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:41 IST
Last Updated 26 ಡಿಸೆಂಬರ್ 2019, 9:41 IST
ಶಿವಮೊಗ್ಗದಲ್ಲಿ ಬುಧವಾರ ಸಿಹಿಮೊಗ್ಗೆ ಮುಕ್ತದಳ ರಸ್ತೆ ಸುರಕ್ಷತಾ ಜಾಗೃತಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಶಿವಮೊಗ್ಗದಲ್ಲಿ ಬುಧವಾರ ಸಿಹಿಮೊಗ್ಗೆ ಮುಕ್ತದಳ ರಸ್ತೆ ಸುರಕ್ಷತಾ ಜಾಗೃತಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.   

ಶಿವಮೊಗ್ಗ: ಸುರಕ್ಷತಾ ನಿಯಮಗಳನ್ನು ಪಾಲಿಸುವಮೂಲಕ ಅಪಘಾತಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ಭಾರತ್ ಸ್ಕೌಟ್‌ಅಂಡ್ ಗೈಡ್ಸ್ಆಯುಕ್ತ ಎಚ್.ಡಿ.ರಮೇಶ ಶಾಸ್ತ್ರಿಸಲಹೆ ನೀಡಿದರು.

ಮಹಾವೀರ ವೃತ್ತದಲ್ಲಿ ಬುಧವಾರ ಸಿಹಿಮೊಗ್ಗೆ ಮುಕ್ತದಳ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸ್ಕೌಟ್ ಅಂಡ್ ಗೈಡ್ಸ್ ಹೆಮ್ಮೆಯ ಸಂಸ್ಥೆ. ಶಿಸ್ತು ಮತ್ತು ಸಂಯಮ ಇಲ್ಲಿದೆ. ಮಕ್ಕಳ ಮೂಲಕಹಿರಿಯರೂರಸ್ತೆ ನಿಯಮ ಪಾಲಿಸುವಂತೆ ಮಾಡಲಾಗುತ್ತಿದೆಎಂದರು.

ADVERTISEMENT

ಎಎಸ್ಐ ವಜೀರ್ ಮಾತನಾಡಿ, ಹೆಲ್ಮೆಟ್ ಧರಿಸಿದರೆ ಅಪಘಾತದ ಸಮಯದಲ್ಲಿ ಜೀವ ಉಳಿಯುತ್ತದೆ. ಮಕ್ಕಳ ಬಳಿ ಕರ ಪತ್ರ ಕಳುಹಿಸುವ ಮೂಲಕ ದೊಡ್ಡವರಲ್ಲೂ ಜಾಗೃತಿ ಮೂಡಿಸಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ತರಬೇತಿ ಆಯುಕ್ತೆ ಸಿ.ಎಸ್.ಕಾತ್ಯಾಯಿನಿಮಾತನಾಡಿ, ನಮ್ಮ ಸಂಸ್ಥೆ ಸಿಹಿಮೊಗ್ಗೆ ಓಪನ್ ಗ್ರೂಪ್ ಮಕ್ಕಳಿಗೆಸಂಚಾರ ಜಾಗೃತಿ ಮೂಡಿಸುವ ತರಗತಿ ನಡೆಸುತ್ತಿದೆ. ಇಲ್ಲಿ ಮಕ್ಕಳು ರಸ್ತೆ ದಾಟುವಕುರಿತು,ಸಿಗ್ನಲ್, ನಡೆದುಕೊಂಡು ಹೋಗುವಾಗ ಹೇಗೆ ನಿಯಮ ಪಾಲಿಸಬೇಕುಮತ್ತಿತರಮಾಹಿತಿ ನೀಡಲಾಗುವುದು. ಇಲ್ಲಿ ಕಲಿತ 38 ಮಕ್ಕಳು ರಾಜ್ಯ ಪುರಸ್ಕಾರಕ್ಕೆ, 4 ಮಕ್ಕಳು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 3 ವರ್ಷದಿಂದ 25 ವರ್ಷದಯುವಕರವರೆಗೂ ಜಾಗೃತಿಮೂಡಿಸುವ ಕೆಲಸ ಮಾಡಲಾಗುತ್ತಿದೆಎಂದರು.

ಮಹಾವೀರ ವೃತ್ತದಲ್ಲಿ ಸಿಗ್ನಲ್ ದಾಟುವ,ಹೆಲ್ಮೆಟ್ ಧರಿಸುವ, ರಸ್ತೆ ದಾಟುವಕುರಿತುಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು.

ಸಂಸ್ಥೆಯ ಮುಖ್ಯಸ್ಥರಾದ ನಿವೇದಿತಗುಪ್ತ, ಎಂ.ಜಿ.ನಾಗಪ್ರಿಯಾ, ಮಧುಮತಿ, ಉಷಾ, ಪಿ.ನಾಗಪ್ರಿಯಾ, ಸಂಚಾರ ಪೊಲೀಸ್ ಅಧಿಕಾರಿ ಎಚ್.ಸಿ.ಮಂಜುನಾಥ ಪಾಟೀಲ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.